ದ್ವಿಚಕ್ರ ವಾಹನ ಡಿಕ್ಕಿ, ಹೆರಾಜೆ ಶೇಖರ ಬಂಗೇರ ಸಾವು,ಯುವತಿ ಗಂಭೀರ: ರಸ್ತೆ ದಾಟುತಿದ್ದ ವೇಳೆ ನಡೆದ ದುರ್ಘಟನೆ: ಬೆಳ್ತಂಗಡಿ ಸಂತೆಕಟ್ಟೆ ಬಳಿ ಘಟನೆ:

 

 

 

 

ಬೆಳ್ತಂಗಡಿ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿ ಯುವತಿ ಗಂಭೀರ ಗಾಯಗೊಂಡ ಘಟನೆ ಮಾ 28 ರಂದು ರಾತ್ರಿ  ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಬಳಿ  ರಸ್ತೆ ದಾಟುತ್ತಿದ್ದ ಹೆರಾಜೆ ನಿವಾಸಿ  ಶೇಖರ ಬಂಗೇರ (63)  ಎಂಬವರಿಗೆ ಬಸ್ ನಿಲ್ದಾಣದ ಕಡೆಯಿಂದ ಯುವತಿಯೊಬ್ಬರು ಚಲಾಯಿಸಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಶೇಖರ್ ಬಂಗೇರ ಬಂಟ್ವಾಳ ತಲುಪುವಷ್ಟರಲ್ಲಿ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಯುವತಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.ವಿಜಯಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿದ್ದ ಶೇಖರ ಬಂಗೇರ ಅವರು ಬೆಳ್ತಂಗಡಿ ರಾಘವೇಂದ್ರ ಮಠ ಇದರ ಕೋಶಾಧಿಕಾರಿಯಾಗಿದ್ದಾರೆ . ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ  ಅವರ ಮಾವ ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆಯವರ ತಮ್ಮನಾಗಿದ್ದಾರೆ.

error: Content is protected !!