ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ರಸ್ತೆಗೆ ಬಿದ್ದ ಮರ: ವಿದ್ಯುತ್ ತಂತಿಗಳಿಗೆ ಹಾನಿ,ಅದೃಷ್ಟವಶಾತ್ ತಪ್ಪಿದ ದುರಂತ..!

 

 

ಬೆಳ್ತಂಗಡಿ: ನಗರದ ಹೃದಯಭಾಗದಲ್ಲಿ ಇರುವ ಅಂಬೇಡ್ಕರ್ ಭವನದ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಮಾ 25 ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ನಗರದ ಬಸ್ ನಿಲ್ದಾಣದ ಹಳೇ ರಸ್ತೆಯ ಬದಿ ಇರುವ ಅಂಬೇಡ್ಕರ್ ಭವನದ ಬಳಿ ಮರವೊಂದು ಬೆಳಿಗ್ಗೆ ರಸ್ತೆಗೆ ಉರುಳಿ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ದಿನನಿತ್ಯ ಜನರು ಹಾಗೂ ವಾಹನ ಸಂಚಾರ ಇರುವ ಈ ರಸ್ತೆಯಲ್ಲಿ ಅದೃಷ್ಟವಶಾತ್ ಮರ ಬೀಳುವ ವೇಳೆ ಯಾವುದೇ ವಾಹನ ಹಾಗೂ ಜನ ಸಂಚಾರ ಇಲ್ಲದಿದ್ದುರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಈಗಾಗಲೇ ಪಟ್ಟಣ ಪಂಚಾಯತ್ ಮತ್ತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ.

error: Content is protected !!