₹ 25 ಲಕ್ಷ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ತಿಮಿಂಗಿಲ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಮೀಷನರ್ ಮನ್ಸೂರ್ ಆಲಿ ಬಂಧನ:

 

 

 

 

ಮಂಗಳೂರು: ಲಂಚ ಸ್ವೀಕಾರ ಮಾಡುತಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಮಿಷನರ್ ಮತ್ತು ದಲ್ಲಾಳಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಮುಡಾ ಆಯುಕ್ತ ಮನ್ಸೂ‌ರ್ ಅಲಿ ಅವರು ದಲ್ಲಾಳಿ ಮುಹಮ್ಮದ್ ಸಲೀಂ ಎಂಬಾತನ ಮೂಲಕ ರೂ 25 ಲಕ್ಷ .ಲಂಚ ಸ್ವೀಕರಿಸುತ್ತಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ‌, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ದೂರುದಾರರು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಜಮೀನಿನ ಈ ಹಿಂದಿನ ಮಾಲೀಕರೊಂದಿಗೆ ಪತ್ರ ವ್ಯವಹಾರ ಮಾಡಿದ್ದರು. ಅದರಂತೆ ಈ ಜಮೀನು 2024 ಜನವರಿಯಲ್ಲಿ ಪಾಲಿಕೆಯ ಹೆಸರಿಗೆ ನೋಂದಣಿ ಸಹ ಆಗಿತ್ತು. ಬಳಿಕ ಪಾಲಿಕೆಯ ಆಯುಕ್ತರು ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದರು. ಆದರೆ, ಮುಡಾ ಆಯುಕ್ತ ಮನ್ಸೂರ್ ಅಲಿ ಈ ದಾಖಲೆ ಪತ್ರಗಳನ್ನು ಪೆಂಡಿಂಗ್ ಇಟ್ಟಿದ್ದರು.ಈ ಬಗ್ಗೆ ದೂರುದಾರರು ಮುಡಾ ಆಯುಕ್ತ ಮನ್ಸೂರ್ ಅಲಿ ಅವರ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲಿ ಅವರ ನಿರ್ದೇಶನದಂತೆ ಬ್ರೋಕರ್ ಮುಹಮ್ಮದ್ ಸಲಿಂ ಅವರು ದೂರುದಾರರಿಂದ ರೂ. 25 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

error: Content is protected !!