ಗಡಾಯಿಕಲ್ಲಿನಲ್ಲಿ ಭಾರೀ ಬೆಂಕಿ: ಬೆಂಕಿ ಹಾಕಿರುವ ಅಥವಾ ಸಿಡಿಲು ಬಡಿತದ ಅನುಮಾನ..!:

 

 

ಬೆಳ್ತಂಗಡಿ: ತಾಲೂಕಿನ ಅತೀ ಎತ್ತರದ ಹೆಬ್ಬಂಡೆಯಾದ ಗಡಾಯಿಕಲ್ಲು ನರಸಿಂಹ ಗಡದ ಮೇಲೆ ಭಾರೀ ಬೆಂಕಿ ಕಾಣಿಸುತ್ತಿದ್ದು ಯಾರೋ ಮೇಲೆ ಹೋಗುವ ದಾರಿಯಲ್ಲಿ ಇರುವ ಹುಲ್ಲಿಗೆ ಬೆಂಕಿ ಹಾಕಿದ್ದರೋ ಅಥವಾ  ಸಿಗರೇಟು ಸೇದಿ ಬಿಸಾಡಿದ ಪರಿಣಾಮ ಬೆಂಕಿ ಆವರಿಸಿರಬಹುದೇ ಎಂದು ಸಂಶಯಿಸಲಾಗಿದೆ.ಅದರೆ ಸಂಜೆ ಗಡಾಯಿ ಕಲ್ಲಿನ ಸುತ್ತಮುತ್ತ ತುಂತುರು ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿತದಿಂದ ಬೆಂಕಿ ಬಿದ್ದಿದೆ ಎಂದು ಜನರು ಮಾತನಾಡಿಕೊಳ್ಳುತಿದ್ದಾರೆ. ಕಳೆದ ವರ್ಷ ಕೂಡ ಸಿಡಿಲು ಬಡಿತದಿಂದ ಬೆಂಕಿ ಬಿದ್ದಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

error: Content is protected !!