ವಾಟ್ಸಾಪ್‌ನಲ್ಲಿ ವಿಕಸಿತ ಭಾರತ ಅಭಿಯಾನ: ರವಾನೆಯಾಗುತ್ತಿರುವ ಸಂದೇಶಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ಬ್ರೇಕ್: ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದ ಕಾಂಗ್ರೆಸ್


ದೆಹಲಿ: ಚುನಾವಣೆಯ ಹಿನ್ನಲೆ ವಾಟ್ಸಾಪ್‌ನಲ್ಲಿ ರವಾನೆಯಾಗುತ್ತಿದ್ದ ವಿಕಸಿತ ಭಾರತ ಅಭಿಯಾನದ ಸಂದೇಶ ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೂ ಅನೇಕರ ಮೊಬೈಗೆ ರವಾನೆಯಾಗುತ್ತಿದ್ದು ಈ ಸಂದೇಶವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯವು ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶಗಳನ್ನು ಕಳುಹಿಸಲಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ತಲುಪುವುದು ವಿಳಂಬವಾಗಿರಬಹುದು ಎಂದು ಆಯೋಗಕ್ಕೆ ಮಾಹಿತಿ ನೀಡಿದೆ. ಆದರೆ ಇದನ್ನು ಅಸ್ತ್ರವನ್ನಾಗಿಸಿಕೊಂಡ ತೃಣಮೂಲ ಕಾಂಗ್ರೆಸ್, ಆಕ್ಷೇಪ ವ್ಯಕ್ತಪಡಿಸಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಇದು, ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

error: Content is protected !!