ಗೇರುಕಟ್ಟೆ, ರಬ್ಬರ್ ತೋಟಕ್ಕೆ ಬೆಂಕಿ: ಸ್ಥಳೀಯರ ಸಮಯ ಪ್ರಜ್ಞೆ, ತಪ್ಪಿದ ಅನಾಹುತ:

 

 

 

ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಸರಕಾರಿ ಫ್ರೌಡ ಶಾಲೆಯ ಬಳಿ ರಬ್ಬರ್ ತೋಟಕ್ಕೆ ಮತ್ತು ಏರ್ಟೆಲ್ ಕಂಪನಿಯ ಮೊಬೈಲ್ ಟವರ್ ಸಮೀಪ ಬೆಂಕಿ ಅವಘಡ ನಡೆದ ಘಟನೆ ಮಾ.18 ರಂದು ಸಂಜೆ ನಡೆದಿದೆ.
ವಿಷಯ ತಿಳಿದು ತಕ್ಷಣ ಸ್ಥಳೀಯ ಯುವಕರಾದ ಹಮೀದ್ ಜಿ.ಡಿ,ಪ್ರಕಾಶ್ ಪೂಜಾರಿ ಮೆರ್ಲ,ಸೈಪುಲ್ಲ ಹೆಚ್,ಎಸ್,ಮತ್ತು ಇತರರು ಬೆಂಕಿ ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು.ಅದಲ್ಲದೇ
ಸ್ಥಳೀಯರು ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಅದೇ ಸಮಯದಲ್ಲಿ ತಾಲ್ಲೂಕಿನ ಬೇರೆ ಕಡೆಯಲ್ಲಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿರುವುದರಿಂದ ಗೇರುಕಟ್ಟೆಗೆ ಬರಲು ಸಾಧ್ಯವಾಗಿಲ್ಲವೆಂದು ತಿಳಿದು ಬಂದಿದೆ.
ಖಾಸಗಿ ಕಂಪನಿಯ ಮೊಬೈಲ್‌ ಟವರ್ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಪಾರ್ಮ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಜ್ವಾಲೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮೊಬೈಲ್ ಟವರ್‌ನ ಕೆಳಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಿದೆ ಎಂದು ತಿಳಿದು ಬಂದಿದೆ

error: Content is protected !!