ರಿಕ್ಷಾ ಡಿಕ್ಕಿ 3 ವರ್ಷದ ಮಗು ಸಾವು :ಬೆಳ್ತಂಗಡಿಯ ಮಾಲಾಡಿ ಬಳಿ ಘಟನೆ:

 

 

 

 

 

ಬೆಳ್ತಂಗಡಿ: ರಿಕ್ಷಾ ಡಿಕ್ಕಿಹೊಡೆದು 3 ವರ್ಷದ ಮಗು ಮೃತಪಟ್ಟ ಘಟನೆ ಮಾಲಾಡಿ ಸಮೀಪದ ಸೋಣಂದೂರು ಬಳಿ ಶನಿವಾರ ಸಂಭವಿಸಿದೆ.

ಮುಂಡಾಡಿಯ ಚಂದ್ರಶೇಖ‌ರ್ ಅವರ ಮನೆ ರಸ್ತೆಯ ಹತ್ತಿರದಲ್ಲೆ ಇದ್ದು ಮನೆಯಲ್ಲಿದ್ದ ಮಗು ಮನೆಯವರ ಗಮನಕ್ಕೆ ಬಾರದೇ ರಸ್ತೆಗೆ ಓಡಿ ಬಂದಿದೆ ಎನ್ನಲಾಗುತ್ತಿದ್ದು, ಈ ಸಂದರ್ಭ ರಸ್ತೆಯಲ್ಲಿ ಸಂಚರಿಸುತಿದ್ದ ರಿಕ್ಷಾ ಮಗುವಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗುವಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಮಗುವನ್ನು  ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!