ಜನನ, ಮರಣಗಳ ಉಪನೋಂದಣಾಧಿಕಾರಿಗಳಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳ ನೇಮಕ: ರಾಜ್ಯ ಸರಕಾರದಿಂದ ಆದೇಶ

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ ಮರಣಗಳ ಉಪನೋಂದಣಾಧಿಕಾರಿಗಳಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನನ, ಮರಣ ನೋಂದಣಿಯನ್ನು ಸುವ್ಯವಸ್ಥಿತವಾಗಿ ಹಾಗೂ ಉತ್ತಮವಾಗಿ ಅನುಷ್ಠಾನಗೊಳಿಸಲು ಎಲ್ಲಾ ಅವಶ್ಯಕ ಸೌಕರ್ಯ ಹೊಂದಿರುವ ಗ್ರಾ.ಪಂ ಕಚೇರಿಗಳು ಸಾರ್ವಜನಿಕರಿಗೆ ಹತ್ತಿರವಿರುವ ಜನಸ್ನೇಹಿ ಕೇಂದ್ರವಾಗಿದ್ದು ಜನನ ಮರಣ ನೋಂದಣಿಯನ್ನು ಬಲಪಡಿಸುವ ಸಲುವಾಗಿ ಪಂಚಾಯತ್ ಕಾರ್ಯದರ್ಶಿಗಳಿಗೆ ಈ ಜವಬ್ಧಾರಿಯನ್ನು ವಹಿಸಲಾಗಿದೆ.

ಜನನ ಅಥವಾ ಮರಣ ಘಟಿಸಿದ 30 ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬದಲಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ತಿದ್ದುಪಡಿ ಮಾಡಲಾಗಿದೆ.

ಜನನ, ಮರಣ ನೋಂದಣಿಯ 73ನೇ ಸೇವೆಯಾಗಿದ್ದು, ಸಾರ್ವಜನಿಕರಿಗೆ ತ್ವರಿತ ಸೇವೆ ದೊರೆಯಲಿದೆ. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಶೇಕಡ 100ರಷ್ಟು ಜನನ, ಮರಣ ನೋಂದಣಿಯ ಗುರಿಯನ್ನು ಸಾಧಿಸಲು ಮತ್ತು ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ಎಲ್ಲಾ ಜನನ ಮತ್ತು ಮರಣವನ್ನು ನೋಂದಾಯಿಸಲು ಸಾಧ್ಯವಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

error: Content is protected !!