ಕಡಿದ ಮರ ಮೊದಲು ತೆರವು ಗೊಳಿಸಿ: ಮರ ಕಡಿಯಲು ಬಂದ ಗುತ್ತಿಗೆದಾರರಿಗೆ ಘೇರಾವು: ಮಡಂತ್ಯಾರ್ ವರ್ತಕರಿಂದ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಆಕ್ರೋಶ: ಧೂಳು ಏಳದಂತೆ ನೀರು ಹಾಕಲು ಒತ್ತಾಯ

ಮಂಡತ್ಯಾರ್: ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಬೆಳ್ತಂಗಡಿ ತಾಲೂಕಿನ ಅನೇಕ ಕಡೆ ರಸ್ತೆ ಬದಿ ಬೆಳೆದಿರೋ ಮೃಹತ್ ಮರಗಳನ್ನು ಕಡಿಯಲಾಗಿದ್ದು ಆದರೆ ಇಂದು ಮಡಂತ್ಯಾರು ಪೇಟೆಯಲ್ಲಿರುವ ಮರಗಳನ್ನು ತೆರವುಗೊಳಿಸುವ ಸಂದರ್ಭ ವರ್ತಕರು ಗುತ್ತಿಗೆದಾರರಿಗೆ ಘೇರಾವು ಹಾಕಿದ್ದಾರೆ.

ಕಾಮಗಾರಿ ಆರಂಭವಾದಾಗ ಕಡಿದ ಮರಗಳನ್ನು ಇನ್ನೂ ತೆರವುಗೊಳಿಸದ ಹಿನ್ನಲೆ ಮೊದಲು ಅವುಗಳನ್ನು ತೆರವು ಗೊಳಿಸಿ ನಂತರ ಮರ ಕಡಿಯಲು ಮುಂದಾಗಿ ಎಂದು ಸಾರ್ವಜನಿಕರು ಅಧಿಕಾರಿಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಧೂಳು ಏಳದಂತೆ ನೀರು ಹಾಕಲು ಕ್ರಮ ಕೈಗೊಳ್ಳಿ ಎಂದಿದ್ದಾರೆ.

error: Content is protected !!