ಬೆಳ್ತಂಗಡಿ: ಬಳಂಜ ಬಿಲ್ಲವ ಸಂಘವು ಎಲ್ಲಾ ಸಮಾಜದೊಂದಿಗೆ ಸೇರಿ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದೆ. ಬಳಂಜದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶಿಸ್ತು ,ಆದರ್ಶಗಳನ್ನು ಕಾಣಬಹುದು. ಬಿಲ್ಲವ ಸಮಾಜ ಹಿಂದೂ ಸಮಾಜದ ಶಕ್ತಿಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶುಕ್ರವಾರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ರಿ ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ- ನಾಲ್ಕೂರು-ತೆಂಕಕಾರAದೂರು ಇದರ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀಗುರುಪೂಜೆ, ಶ್ರೀಸರ್ವೇಶ್ವರಿ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಸಾರ್ಥಕ ಬದುಕನ್ನು ರೂಪಿಸಲು ಬ್ರಹ್ಮ ಶ್ರೀನಾರಾಯಣಗುರುಗಳ ಆದರ್ಶಗಳನ್ನು ಪಾಲಿಸಬೇಕು. ಬಿಲ್ಲವ ಸಮಾಜ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳನ್ನು ಪಾಲಿಸುತ್ತ ಬಂದಿದೆ. ಬಳಂಜ ಬಿಲ್ಲವ ಸಂಘದ ಕಟ್ಟಡ ನಿರ್ಮಾಣದ ವೇಳೆ ಸುಮಾರು 40 ಲಕ್ಷ ರೂಗಳನ್ನು ಸರಕಾರದಿಂದ ಕೊಡಿಸುವ ಸೇವೆ ಮಾಡಿದ್ದು ಮುಂದಿನ ಬೇಡಿಕೆಯಾದ ಅಡುಗೆ ಕೋಣೆ ನಿರ್ಮಾಣಕ್ಕೆ 10 ಲಕ್ಷ ರೂ, ತಡೆಗೋಡೆ ನೆರವು ನೀಡಲು ಪ್ರಯತ್ನಿಸುವುದಲ್ಲದೆ ಕಾಪಿನಡ್ಕದಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಉಜಿರೆ ಬದುಕುಕಟ್ಟೋಣ ತಂಡದ ಸಂಚಾಲಕ ಉದ್ಯಮಿ ಮೋಹನ್ ಕುಮಾರ್ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ಕಲಿಸಬೇಕು. ಇಲ್ಲಿ ಮಕ್ಕಳಿಗೆ ಭಜನೆಯ ಹಾದಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ಊರಿನ ಸರಕಾರಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಮುಂಡೂರು ಶ್ರೀನಾಗ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೀವ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ, ಬೆಳ್ತಂಗಡಿ ಜೆಸಿಐನ ಅಧ್ಯಕ್ಷ ರಂಜಿತ್ ಹೆಚ್ ಡಿ, ಮಂಗಳೂರು ಸೋಮೇಶ್ವರ ಪುರಸಭೆೆ ಸದಸ್ಯ ಜಯಪುಜಾರಿ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಶುಭಹಾರೈಸಿದರು.
ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಬಾ ಕುಲಾಲ್, ಸಂಘದ ಗೌರವ ಅಧ್ಯಕ್ಷ ಹೆಚ್ ದರ್ಣಪ್ಪ ಪೂಜಾರಿ, ಗೌರವ ಮಾರ್ಗದರ್ಶಕ ಕೆ ವಸಂತ ಸಾಲ್ಯಾನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್, ಬಳಂಜ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ನಿರ್ದೇಶಕರುಗಳಾದ ದೇಜಪ್ಪ ಪೂಜಾರಿ, ಗುರುಪ್ರಸಾದ್ ಹೆಗ್ಡೆ, ವಿಶ್ವನಾಥ್ ಹೊಳ್ಳ, ಹೇಮಂತ್ ಕಟ್ಟೆ, ದಿನೇಶ್ ಪಿ.ಕೆ ಮಮತಾ ಕಟ್ಟೆ, ಮತ್ತು ಪಿ ಡಬ್ಯುಡಿ ಕಿರಿಯ ಇಂಜಿನಿಯರಿಂಗ್ ಸೂರಜ್ ಪೂಜಾರಿ, ಮಂಗಳೂರು ಪುರಸಬೆ ಸದಸ್ಯ ಜಯಪೂಜಾರಿ, ಬೆಳ್ತಂಗಡಿ ಜೆ ಸಿ ಐ ಅಧ್ಯಕ್ಷ ರಂಜಿತ್ ಹೆಚ್ ಡಿ, ಮಂಗಳೂರು ಯುವವಾಹಿನಿ ಅಧ್ಯಕ್ಷ ಹರೀಶ್ ಪೂಜಾರಿ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಬ್ರಹ್ಮಶ್ರೀ ಕುಣಿತ ಭಜನಾಮಂಡಳಿ ವತಿಯಿಂದ ಶಾಸಕ ಹರೀಶ್ ಪೂಂಜಾರವರನ್ನು ಅಭಿನಂದಿಸಲಾಯಿತು.
ಸಂಘದ ಅದ್ಯಕ್ಷ ಸಂತೋಷ್ ಪಿ ಕೊಟ್ಯಾನ್ ಸ್ವಾಗತಿಸಿ ನಿರ್ದೇಶಕ ಯತೀಶ್ ವೈ ವಂದಿಸಿದರು. ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.