ಬೆಂಗಳೂರು: ರಾಷ್ಟ್ರಗೀತೆಯೊಂದಿಗೆ ‘ದಿ ರಾಮೇಶ್ವರಂ ಕೆಫೆ’ ರಿ ಓಪನ್:ಗ್ರಾಹಕರಿಂದ ಉತ್ತಮ ಸ್ಪಂದನೆ: ಹೊಟೇಲ್ ನಲ್ಲಿ ಹೆಚ್ಚಿದ ಭದ್ರತೆ: ನಿವೃತ್ತ ಸೈನಿಕರ ನೇಮಕ

ಬೆಂಗಳೂರು: ಬಾಂಬ್ ಬ್ಲಾಸ್ಟ್ ಬಳಿಕ ಬಂದ್ ಆಗಿದ್ದ ‘ದಿ ರಾಮೇಶ್ವರಂ ಕೆಫೆ’ ಇಂದಿನಿಂದ ಮತ್ತೆ ಆರಂಭವಾಗಿದೆ.

ಕೆಫೆಯನ್ನು ಹೂವು ಹಾಗೂ ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು ಇಂದು ಬೆಳಗ್ಗೆ 6.30ಕ್ಕೆ ವಿಶೇಷ ಪೂಜೆ, ಹೋಮ ಹವನದ ಬಳಿಕ ರಾಷ್ಟ್ರಗೀತೆಯೊಂದಿಗೆ ಕೆಫೆಯನ್ನು ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಆರಂಭ ಮಾಡಿದರು. ನಿನ್ನೆಯಿಂದ ಕೆಫೆಯಲ್ಲಿ ವಿಶೇಷ ಪೂಜೆ ಕೂಡ ನೆರವೇರಿತ್ತು.

ಕೆಫೆ ತೆರೆಯುತ್ತಿದ್ದಂತೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಕೆಫೆ ಮಾಲೀಕ ರಾಘವೇಂದ್ರ ರಾವ್ ಖುದ್ದು ಗ್ರಾಹಕರ ಬಳಿ ಬಂದು ಮಾತನಾಡಿಸುತ್ತಿದ್ದು, ಗ್ರಾಹಕರಿಗೆ ಧೈರ್ಯ ತುಂಬುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡುತ್ತಿದ್ದು, ಗ್ರಾಹಕರಿಂದ ಕೂಡ ಕೆಫೆ ಮಾಲೀಕರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ.

ಕೆಫೆಯನ್ನು ಮೊದಲಿಗಿಂತ ಹೆಚ್ಚಿನ ಭದ್ರತೆಯಲ್ಲಿ ಆರಂಭಿಸಲಾಗಿದ್ದು , ಹೊಟೇಲ್ ಗೆ ಪ್ರವೇಶಿಸುವಲ್ಲಿ ಹೊಸದಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿದ್ದಾರೆ. ನಿವೃತ್ತಿ ಸೈನಿಕರ ನೇಮಕ ಮಾಡಿಕೊಳ್ಳಲಾಗಿದ್ದು, ಸಂಶಯಾಸ್ಪದ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಗ್ರಾಹಕರ ಬ್ಯಾಗ್ ತಪಾಸಣೆ ಮಾಡಲಾಗುತ್ತಿದೆ.

error: Content is protected !!