ಮಾ 31 ಪಿಲಿಪಂಜರ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ , ದೈವಗಳ ನೇಮೋತ್ಸವ:ಉಜಿರೆ ಜನಾರ್ಧನ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಪಿಲಿಪಂಜರ ಲಾಯಿಲ ಬೆಳ್ತಂಗಡಿ. ಇಲ್ಲಿ ಮಾ 31 ರಂದು ನಡೆಯುವ ಶ್ರೀ ಉಳ್ಳಾಲ್ತಿ, ಶ್ರೀ ಉಳ್ಳಾಕ್ಲು, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಪಿಲಿಪಂಜರ ವ್ಯವಸ್ಥಾಪನ ಸಮಿತಿಯ ಗೌರಾವಾಧ್ಯಕ್ಷರಾದ  ಶರತ್ ಕೃಷ್ಣ ಪಡ್ವೆಟ್ನಾಯ ಮಾ 07 ರಂದು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುರೇಶ್ ಬರೆಮೇಲು, ಪ್ರಧಾನ ಕಾರ್ಯದರ್ಶಿ ಸುಧಾಕರ್ ಬಿ.ಎಲ್. ಕಾರ್ಯದರ್ಶಿ ಪುಷ್ಪರಾಜ್ ಲಾಯಿಲ, ಕೋಶಾಧಿಕಾರಿ ಲಕ್ಷ್ಮಣ್ ಜಿ. ಎಸ್, ಜೊತೆ ಕಾರ್ಯದರ್ಶಿ ಅನಿಲ್ ಕಕ್ಕೆನ,ಸಮಿತಿಯ ಸದಸ್ಯರಾದ, ಸಂಜೀವ ಶೆಟ್ಟಿ ಕುಂಠಿನಿ, ಗಿರೀಶ್ ಡೊಂಗ್ರೆ, ಗಣೇಶ್ ಆರ್ ಲಾಯಿಲ, ದೇವರಾಜ್ ಶಿವಾಜಿನಗರ, ಸದಾನಂದ ಪೂಜಾರಿ, ಗಂಗಾಧರ್ ಹೆಗ್ಡೆ, ಉಳ್ಳಾಲ್ತಿ ಬೈಲುವಾರು ಸಮಿತಿಯ ಅಧ್ಯಕ್ಷೆ  ಶಶಿ ಉಪಸ್ಥಿತರಿದ್ದರು.

error: Content is protected !!