ಲೋಕಸಭಾ ಚುನಾವಣೆ 2024: ಮಾ.14 ಅಥವಾ 15ರಂದು ದಿನಾಂಕ ಪ್ರಕಟ:ಮಾ.14ರಿಂದಲೇ ನೀತಿ ಸಂಹಿತೆ ಜಾರಿ?

ನವದೆಹಲಿ: ಲೋಕಸಭಾ ಚುನಾವಣಾ ದಿನಾಂಕ ಮಾರ್ಚ್ ಮಧ್ಯೆ ಘೋಷಣೆಯಾಗುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಚುನಾವಣಾ ಆಯೋಗವು ಮಾರ್ಚ್ 14 ಅಥವಾ 15 ರಂದು ಲೋಕಸಭಾ ಚುನಾವಣೆ ಘೋಷಿಸಲಿದೆ ಎಂದು ತಿಳಿದು ಬಂದಿದೆ. 2019ರ ಲೋಕಸಭಾ ಚುನಾವಣೆಯಂತೆಯೇ ಈ ಬಾರಿಯೂ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಎಪ್ರಿಲ್ 2ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದ್ದರಿಂದ ಮಾರ್ಚ್ 14ರಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ.

error: Content is protected !!