ಮಾ.09 : ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ ವ್ಯವಸ್ಥೆ: ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಂಗಣದಲ್ಲಿ ಕಾರ್ಯಕ್ರಮ

ಬೆಳ್ತಂಗಡಿ: ಕಾಂಗ್ರೆಸ್ ಸರಕಾರದ ನೀಡಿರುವ ಪಂಚ ಗ್ಯಾರಂಟಿಯ ಫಲಾನುಭವಿಗಳ ಸಮಾವೇಶ ಮಾ.09 ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಂಗಣದಲ್ಲಿ ನಡೆಯಲಿದ್ದು, ಸಮಾವೇಶಕ್ಕೆ ತೆರಳುವವರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತೀ ಗ್ರಾಮ ಪಂಚಾಯತಿಗೆ ಬಸ್ಸುಗಳನ್ನು ಒದಗಿಸಲಾಗಿದ್ದು ಮಾರ್ಗಸೂಚಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಗ್ರಾಮ ಪಂಚಾಯಿತಿಗಳಿಂದ ಬಸ್ಸುಗಳು ಹೊರಡಲಿದ್ದು ಸಮಾವೇಶ ಮುಗಿದ ಬಳಿಕ ಫಲಾನುಭವಿಗಳನ್ನು ವಾಪಾಸು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ ಅಥವಾ ಅಂಗನವಾಡಿ ಕಾರ್ಯಕರ್ತೆಯವರನ್ನು ಸಂಪರ್ಕಿಸಬಹುದೆಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎಸ್.ತಿಳಿಸಿದ್ದಾರೆ.

error: Content is protected !!