ಚಾರಣಕ್ಕೆ ಬಂದ ಬೆಂಗಳೂರಿನ ಯುವಕ ನಾಪತ್ತೆ: ಪೊಲೀಸ್, ಅರಣ್ಯಾಧಿಕಾರಿಗಳಿಂದ ಹುಡುಕಾಟ: ಮಧ್ಯ ರಾತ್ರಿ ದಟ್ಟ ಕಾಡಿನೊಳಗೆ ಯುವಕ ಪತ್ತೆ

ಬೆಳ್ತಂಗಡಿ : ಚಾರ್ಮಾಡಿ ಅರಣ್ಯಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಯುವಕನೋರ್ವ ಕಾಣೆಯಾಗಿ ಬಳಿಕ ಪೊಲೀಸರ ನಿರಂತರ ಹುಡುಕಾಟದ ವೇಳೆ ಪತ್ತೆಯಾದ ಘಟನೆ ಫೆ.25ರಂದು ನಡೆದಿದೆ.

ಭಂಡಾಜೆ ಫಾಲ್ಸ್ ನೋಡಲು ಬಂದಿದ್ದ ಬೆಂಗಳೂರು ಮೂಲದ 10 ವಿದ್ಯಾರ್ಥಿಗಳಲ್ಲಿ ಧನುಷ್ ಎಂಬಾತ ಸುಮಾರು 8 ಕಿಮೀ ಕಾಡಿನ ಮಧ್ಯದಲ್ಲಿ ಕಾಣೆಯಾಗಿದ್ದ. ಬಳಿಕ ಈ ತಂಡದಲ್ಲಿದ್ದ ಒಬ್ಬ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡದ್ದು, ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕನ ಮೊಬೈಲ್ ನೆಟ್‌ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು.

ಸತತ ಹುಡುಕಾಟದ ಬಳಿಕ ಮಧ್ಯ ರಾತ್ರಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮದ್ಯದಲ್ಲಿ ದಲ್ಲಿ ಒಬ್ಬನೇ ಸಿಕ್ಕಿಕೊಂಡು ನಿಂತಿರುವುದು ಕಂಡು ಬಂದಿತ್ತು. ಬಳಿಕ ಪೊಲೀಸರು, ಅರಣ್ಯಾಧಿಕಾರಿಗಳು ಆತನ ಬಳಿಗೆ ಹೋಗಿ ಧೈರ್ಯ ತುಂಬಿದ್ದಾರೆ. ಅಲ್ಲಿಂದ 10 ಜನರನ್ನು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದ ಪೊಲೀಸರು ನಂತರ ಅವರು ಮಂಗಳೂರಿಗೆ ಹೋಗಬೇಕೆಂದು ಇಚ್ಚಿಸಿದ ಮೇರೆಗೆ ಅವರೆಲ್ಲರನ್ನು ಸುರಕ್ಷಿತವಾಗಿ ಕಳುಹಿಸಿ ಕೊಟ್ಟಿದ್ದಾರೆ.

ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೆಹಬೂಬ್ ಸಾಧನಿ ಶಂಕರ್ ಬೋವಿ ಹಾಗೂ ಸ್ಥಳೀಯರು ಜೊತೆಗಿದ್ದರು.

error: Content is protected !!