ಬೆಳ್ತಂಗಡಿ: ನಗರದಲ್ಲಿ ಕಾಡತೊಡಗಿದ ನೀರಿನ ಸಮಸ್ಯೆ: 13 ಕೋಟಿ ವೆಚ್ಚದ ಕಾಮಗಾರಿ ನಿಷ್ಪ್ರಯೋಜಕ : ನಗರಾಭಿವೃದ್ಧಿ ಸಚಿವರಿಗೆ ಕೆ.ಪ್ರತಾಪ್ ಸಿಂಹ ನಾಯಕ್ ಪತ್ರ

ಬೆಳ್ತಂಗಡಿ: ನಗರದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವ ಕುರಿತು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ವಾರ್ಡ್‍ಗಳಿಗೆ ನೀರು ಪೂರೈಕೆಗಾಗಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ರೂ. 13 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು 5 ವರ್ಷಗಳೇ ಕಳೆದಿದ್ದರೂ, ಇದುವೆಗೂ ನಾಗರೀಕರಿಗೆ ಒಂದು ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಅನುಷ್ಠಾನಗೊಳಿಸಿರುವ ರೂ. 13 ಕೋಟಿ ವೆಚ್ಚದ ಕಾಮಗಾರಿ ಇಂದಿಗೂ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ಸುಮಾರು 13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಯೋಜನೆ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದ ಇಂದಿಗೂ ಸಂಪೂರ್ಣ ನಿಷ್ಪ್ರಯೋಜಕವಾಗಿಯೇ ಉಳಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ, ನದಿಗಳಲ್ಲಿ ನೀರಿನ ಹರಿವು ಈಗಾಗಲೇ ನಿಂತಿದೆ. ನಗರದಲ್ಲಿ ನೀರಿನ ಸಮಸ್ಯೆ ಈಗಾಗಲೇ ವ್ಯಾಪಕವಾಗಿ ಕಾಡತೊಡಗಿದೆ. ಆದುದರಿಂದ ನಗರದ ಜನರ ಅನುಕೂಲಕ್ಕಾಗಿ ಮಾಡಿದ ಕೋಟ್ಯಾಂತರ ವೆಚ್ಚದ ಕುಡಿಯುವ ನೀರಿನ ಈ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತಾಗಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

error: Content is protected !!