ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ವರ್ತಕರಿಗೆ , ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ: ವರ್ತಕರ ಸಂಘದಿಂದ ಶಾಸಕ ಹರೀಶ್ ಪೂಂಜರಿಗೆ ಮನವಿ

 

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ 2ನೇ ಹಂತದ ರಸ್ತೆ ಕಾಮಗಾರಿಯಲ್ಲಿ ಅನೇಕ ಲೋಪಗಳು ಕಂಡು ಬರುತ್ತಿದ್ದು, ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಶೀಘ್ರವೇ ಪರಿಹರಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಅವರಿಗೆ ಬೆಳ್ತಂಗಡಿ ವರ್ತಕರ ಸಂಘದಿಂದ ಒತ್ತಾಯಿಸಲಾಯಿತು.

ಫೆ.19ರಂದು ಬೆಳ್ತಂಗಡಿ ವರ್ತಕರ ಸಂಘದಿಂದ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಶಾಸಕ ಹರೀಶ್ ಪೂಂಜ ಅವರೊಂದಿಗೆ ಮಾತು ಕತೆ ನಡೆಸಿ ಸಮಸ್ಯೆಗಳ ಕುರಿತು ಮನವಿ ನೀಡಿದರು.

ಮನವಿಗೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಪೂಂಜ ಅವರು ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹಾಗೂ ನಗರದಲ್ಲಿ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸುವ ಸಲುವಾಗಿ ಅಧಿಕಾರಿ, ಗುತ್ತಿಗೆದಾರರನ್ನು ಕರೆಯಿಸಿ ಸ್ಪಷ್ಟಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಕಾರ್ಯದರ್ಶಿ ರೊನಾಲ್ಡ್ ಲೋಬೊ, ಜತೆಕಾರ್ಯದರ್ಶಿ ಯಶವಂತ, ಪಟವರ್ಧನ್, ಕೋಶಾಧಿಕಾರಿ ಸುನಿಲ್‍ಶೆಣೈ, ಸದಸ್ಯರಾದ ಜಯಾನಂದ ಗೌಡ, ಚಂದ್ರಕಾಂತ ಕಾಮತ್, ಪ್ರಮೋದ್ ನಾಯಕ್, ಶೀತಲ್ ಜೈನ್, ಶಶಿಧರ ಪೈ, ಜೂಡೋ ಲೋಬೊ ಮತ್ತಿತರರು ಜೊತೆಗಿದ್ದರು.

error: Content is protected !!