ಲಾಯಿಲ ಗ್ರಾಮ ಪಂಚಾಯತ್ ಸಂವಿಧಾನ ಜಾಗೃತಿ ಜಾಥ:ಭವ್ಯ ಮೆರವಣಿಗೆಯೊಂದಿಗೆ ಅದ್ಧೂರಿ ಸ್ವಾಗತ:

 

 

ಬೆಳ್ತಂಗಡಿ:ಕರ್ನಾಟಕ ಸರ್ಕಾರ , ದ.ಕ ಜಿಲ್ಲಾಡಳಿತ , ದ.ಕ ಜಿಲ್ಲಾ ಪಂಚಾಯತ್ , ಸಮಾಜ ಕಲ್ಯಾಣ ಇಲಾಖೆ , ತಾಲೂಕು ಪಂಚಾಯತ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಲಾಯಿಲ ಇವುಗಳ ಜಂಟಿ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಅತ್ಯಂತ ಸಂಭ್ರಮ , ಸಡಗರದಿಂದ ಸ್ವಾಗತಿಸಲಾಯಿತು.

 

 

 

ಲಾಯಿಲ ಜಂಕ್ಷನ್ ನಲ್ಲಿ ಜಾಥವನ್ನು ಪಂಚಾಯತ್ ಅಧ್ಯಕ್ಷರು , ಉಪಾಧ್ಯಕ್ಷರು , ಸದಸ್ಯರು ಸಾರ್ವಜನಿಕರು , ಶಾಲಾ ಮಕ್ಕಳು ಸ್ವಾಗತಿಸಿ , ಪಂಚಾಯತ್ ತನಕ ಮೆರವಣಿಗೆ ನಡೆಸಿ ಸ್ವಾಗತಿಸಿದರು.

 

 

ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ಪಂಚಾಯತ್ ಅಧ್ಯಕ್ಷರಾದ ಜಯಂತಿ ಎಂ.ಕೆ ರವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ , ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ , ದೀಪ ಬೆಳಗಿಸಿ ಉದ್ಘಾಟಿಸಿದರು. ದಲಿತ ಮುಖಂಡ ಶೇಖರ್ ಲಾಯಿಲ ಅವರು ಸಂವಿಧಾನದ ಮಹತ್ವ ಹಾಗೂ ಜಾಗೃತಿ ಜಾಥ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರಲ್ಲದೇ ತನ್ನ ಸೊಸೆಯ ಮದುವೆಯ ಅಂಗವಾಗಿ ಲಾಯಿಲ ಗ್ರಾಮದ ಮೂರು ಸರ್ಕಾರಿ ಶಾಲೆಗಳಿಗೆ “ಸಂವಿಧಾನ ಓದು” ಪುಸ್ತಕವನ್ನು ನೀಡಿದರು.

 

 

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ರತ್ನಾವತಿ , ಹಿ.ಪ್ರಾ ಶಾಲೆ ಕರ್ನೋಡಿ ಲಾಯಿಲ ಮುಖ್ಯೋಪಾಧ್ಯಾಯ ಜಗನ್ನಾಥ ಎಂ , ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ , ದಲಿತ ಮುಖಂಡ ಜಗನ್ನಾಥ ಬೈರ ಉಪಸ್ಥಿತರಿದ್ದರು.

 

 

 

ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಬಗ್ಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕರ್ನೋಡಿ ಲಾಯಿಲ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಮೊದಲಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸ್ವಾಗತಿಸಿ , ಲೆಕ್ಕಾಧಿಕಾರಿ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ , ಧನ್ಯವಾದವಿತ್ತರು. ಗ್ರಾಮ ಪಂಚಾಯತ್ ನ ಸದಸ್ಯರು , ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು ‌.

error: Content is protected !!