ಮೂರು ಅಂತಸ್ತಿನ ಮನೆಯೊಳಗೆ ಬೆಂಕಿ ಅವಘಡ: ಬೆಳ್ಳಂ ಬೆಳಗ್ಗೆ ಮನೆಯೊಳಗೆ ಆವರಿಸಿದ ಜ್ವಾಲೆ: ಮೂವರು ಸಹೋದರಿಯರು ಸಜೀವ ದಹನ..!

ಜಮ್ಮು ಮತ್ತು ಕಾಶ್ಮೀರ: ಮೂರು ಅಂತಸ್ತಿನ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮೂವರು ಸಹೋದರಿಯರು ಸಾವನ್ನಪ್ಪಿದ ಘಟನೆ ಫೆ.12ರಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ನಲ್ಲಿ ಸಂಭವಿಸಿದೆ.

ಮೂವರು ಅಕ್ಕ – ತಂಗಿಯರು ಮೇಲಿನ ಮಹಡಿಯಲ್ಲಿ ಮಲಗಿದ್ದರು. ಇಂದು ಮುಂಜಾನೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ನೋಡು ನೋಡುತ್ತಿದ್ದಂತೆ ಇಡೀ ಮನೆಗೆ ಬೆಂಕಿ ಆವರಿಸಿತ್ತು. ಈ ವೇಳೆ ಮನೆಯಿಂದ ಹೊರಬರಲಾಗದೆ ಮೂವರು ಅಕ್ಕ – ತಂಗಿಯರು ಸಜೀವ ದಹನಗೊಂಡಿದ್ದಾರೆ. ಮೃತರನ್ನು ಬಿಸ್ಮಾ (18), ಸೈಕಾ (14) ಮತ್ತು ಸಾನಿಯಾ (11) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ ಬಳಿಕ ಮೂವರು ಸಹೋದರಿಯರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!