ಬೆಳ್ತಂಗಡಿ : ವೇಣೂರು ಪಟಾಕಿ ತಯಾರಿಕೆ ಮಾಡುವ ವೇಳೆ ಸ್ಫೋಟಗೊಂಡ ಪ್ರಕರಣ ಸಂಬಂಧ ಪಟಾಕಿ ಮಾರಾಟ ಮತ್ತು ಗೋಡೌನ್ ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ಜ.29 ರಂದು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ. ಈ ಸಂಬಂಧ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಗಳನ್ನು ಜ.30 ರಂದು ತಹಶೀಲ್ದಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 9 ಕಡೆ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಇದ್ದು. ಬೆಳ್ತಂಗಡಿ ತಹಶೀಲ್ದಾರ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಜ.30 ರಂದು ಏಕಕಾಲದಲ್ಲಿ 7 ಸ್ಥಳಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಪಟಾಕಿ ಮಾರಾಟ ಮತ್ತು ದಾಸ್ತಾನು ಮಾಡದಂತೆ ಅಂಗಡಿಗೆ ನೋಟಿಸ್ ಅಂಟಿಸಿದ್ದಾರೆ.
*ಮೂರು ಪಟಾಕಿ ದಾಸ್ತಾನು ಗೋಡೌನ್ ಸೀಲ್ ಡೌನ್
ಉಜಿರೆ ಪ್ರಭಾತ್ ಸ್ಟೋರ್ ,ಬೆಳ್ತಂಗಡಿ ಮುಖ್ಯರಸ್ತೆ ಬೆಳ್ತಂಗಡಿ ಜನರಲ್ ಮರ್ಚೆಂಟ್ , ಚಾಮುಂಡೇಶ್ವರಿ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮೂರು ಗೋಡೌನ್ ನಲ್ಲಿ ಪಟಾಕಿ ದಾಸ್ತಾನು ಮಾಡಲಾಗಿದ್ದು ಇದನ್ನು ಕಂದಾಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮುಂದಿನ ಸರಕಾರದ ಆದೇಶದವರೆಗೂ ಬೀಗ ಹಾಕಿದ್ದಾರೆ.
ಬೆಳ್ತಂಗಡಿಯ ಎಸ್.ಪುಂಡಲೀಕ ಭಟ್ ಮಾಲೀಕತ್ವದ ಪ್ರಭಾತ್ ಸ್ಟೋರ್, ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಕೆ.ಮಂಜುನಾಥ್ ಕಾಮತ್ ಮಾಲೀಕತ್ವದ ಜನರಲ್ ಮರ್ಚೆಂಟ್, ಬೆಳ್ತಂಗಡಿಯ ಸುಧೀರ್ ಹೊಳ್ಳ ಮಾಲೀಕತ್ವದ ಚಾಮುಂಡೇಶ್ವರಿ ಎಂಟರ್ ಪ್ರೈಸಸ್ , ಉಜಿರೆಯ ಬಿ.ರಾಜರಾಮ್ ಭಟ್ ಮಾಲೀಕತ್ವದ ಮಂಜು ಶ್ರೀ ಸ್ಟೋರ್ , ಉಜಿರೆಯ ಪ್ರಭಾತ್ ಸ್ಟೋರ್,ಪುಂಜಾಲಕಟ್ಟೆಯ ಬಿ.ವಸಂತ ಬಾಳಿಗ ಮಾಲೀಕತ್ವದ ವಸಂತ್ ಸ್ಟೋರ್ , ವೇಣೂರಿನ ಬಿ.ಮೋಹನ್ ದಾಸ್ ನಾಯಕ್ ಸೇರಿದಂತೆ ಏಳು ಅಂಗಡಿಗಳನ್ನು ಪರಿಶೀಲನೆ ಮಾಡಲಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ರಿಜಿನಲ್ ಫೈರ್ ಅಫಿಸರ್ ರಂಗನಾಥ್ ಮತ್ತು ಸಿಬ್ಬಂದಿಗಳು ಮತ್ತು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.