ಕೆಲಸಕ್ಕೆ ಸೇರಿ 11 ದಿನ: ಪಟಾಕಿ ಸ್ಫೋಟದಲ್ಲಿ ಮೃತಪಟ್ಟ ಹಾಸನದ ಚೇತನ್: ಕಳೆದ 5 ವರ್ಷಗಳಿಂದ ಹಾಸನದ ಪಟಾಕಿ ತಯಾರಿಕಾ ಘಟಕದಲ್ಲಿ ವೃತ್ತಿ: ‘ಮಗ ಕೆಲಸ ಮಾಡಿ ತಿಂಗಳಿಗೆ 3 ಸಾವಿರ ನೀಡುತ್ತಿದ್ದ’: ಚೇತನ್ ತಂದೆ

ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್‌ನ ಗೊಳಿಯಂಗಡಿ ಸಮೀಪದ ಕಲ್ಲಾಜೆಯಲ್ಲಿ ಜ.28ರಂದು ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೂವರು ಸಾವನ್ನಪ್ಪಿದ್ದು , ಅದರಲ್ಲಿ ಒಬ್ಬರು ಹಾಸನದ ಚೇತನ್ (24) ಎಂದು ತಿಳಿದು ಬಂದಿದೆ.

ಕಳೆದ 5 ವರ್ಷಗಳಿಂದ ಹಾಸನದಲ್ಲಿಯೇ ಪಟಾಕಿ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚೇತನ್ ಬಳಿಕ ಕುಕ್ಕೇಡಿ ಗ್ರಾಮ ಪಂಚಾಯತ್‌ನ ಗೊಳಿಯಂಗಡಿ ಸಮೀಪದ ಕಲ್ಲಾಜೆಯಲ್ಲಿನ ಪಟಾಕಿ ತಯಾರಿಕಾ ಘಟಕಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದರು. ದುರಾದೃಷ್ಟವೆಂದರೆ ಕೆಲಸಕ್ಕೆ ಸೇರಿ ಹನ್ನೊಂದೇ ದಿನಕ್ಕೆ ಪಟಾಕಿ ಸ್ಫೋಟದಲ್ಲಿ ಚೇತನ್ ಮೃತಪಟ್ಟಿದ್ದಾರೆ.

ಚೇತನ್ ಮೃತಪಟ್ಟ ಸುದ್ದಿಯನ್ನು ಅವರ ಮನೆಯವರು ಟಿವಿಯಲ್ಲಿ ನೋಡಿ ತಿಳಿದಿದ್ದರು. ಸುದ್ದಿ ತಿಳಿದ ತಕ್ಷಣಾ ಘಟನಾ ಸ್ಥಳಕ್ಕೆ ಬಂದ ಚೇತನ್ ತಂದೆ ಉಮೇಶ್ ನಿನ್ನೆ ಬೆಳಗ್ಗೆ 10 ಗಂಟೆಗೆ ಆತನಿಗೆ ಫೋನ್ ಮಾಡಿ ಮಾತನಾಡಿದ್ದೆ. ಆದರೆ ಈ ದುರಂತದಲ್ಲಿ ಆತ ಮೃತಪಟ್ಟ ವಿಷಯ ನಮ್ಮ ಮನೆಯವರಿಗೆ ಗೊತ್ತಿಲ್ಲ. ಮಗ ಕೆಲಸ ಮಾಡಿ ತಿಂಗಳಿಗೆ 3 ಸಾವಿರ ನೀಡುತ್ತಿದ್ದ. ಪೊಲೀಸರು ನಮ್ಮ ಡಿಎನ್ ಎ ಟೆಸ್ಟ್ ಆಗಬೇಕೆಂತ ಎಂದು ಹೇಳಿದ್ದಾರೆ ಎಂದರು.

error: Content is protected !!