ಪ್ರಜಾಪ್ರಕಾಶ ನ್ಯೂಸ್ ವರದಿಗೆ ಸ್ಪಂದನೆ: ಕುಸಿದ ಉಜಿರೆ ಶಾಲಾ ಕಟ್ಟಡ ದುರಸ್ತಿಗೆ ಮುಂದಾದ ದಾನಿಗಳು: ಮತ್ತೊಂದು ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಲು ಮುಂದಾದ ಬದುಕು ಕಟ್ಟೋಣ ಬನ್ನಿ ತಂಡ:

 

 

ಬೆಳ್ತಂಗಡಿ: ಉಜಿರೆ ಸಮೀಪದ ಹಳೇ ಪೇಟೆ ಬಳಿ ಇರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಮಕ್ಕಳು ಸೇರಿದಂತೆ ಶಿಕ್ಷಕರು ಭಯದಲ್ಲೇ ಶಾಲೆಗೆ ಬರುವಂತಾಗಿತ್ತು. ಕಳೆದ ಸೆ 08 ರಂದು ಶಾಲೆಯ ಒಂದು ಭಾಗದ ಮೇಲ್ಚಾವಣಿ ಕುಸಿದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ಕ್ರತ ವರದಿ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

 

 

 

 

ಇದೀಗ ಈ ಬಗ್ಗೆ ಸ್ಪಂದಿಸಿದ ಉಜಿರೆಯ   ಮೋಹನ್ ಕುಮಾರ್ ನೇತೃತ್ವದ ಬದುಕು ಕಟ್ಟೋಣ ಬನ್ನಿ ತಂಡ,       ಶಾಲೆಯನ್ನು ಸಂಪೂರ್ಣ ನವೀಕರಣಗೊಳಿಸಲು ಮುಂದಾಗಿದೆ. ಇದಕ್ಕಾಗಿ ಸುಮಾರು 25 ಲಕ್ಷ ರೂಪಾಯಿಯ ಅಂದಾಜು ಪಟ್ಟಿ ಸಿದ್ದಗೊಂಡಿದ್ದು ಫೆ 04 ರಂದು ಚಾಲನೆ ದೊರೆಯಲಿದೆ ಎಂಬ  ಮಾಹಿತಿ ಲಭ್ಯವಾಗಿದೆ.  ಹಲವಾರೂ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿರುವ ಬದುಕು ಕಟ್ಟೋಣ ಬನ್ನಿ  ತಂಡ ಸರ್ಕಾರಿ ಶಾಲೆಗಳನ್ನು ಉಳಿಸುವತ್ತ ಮಹತ್ತರ ಯೋಜನೆಗಳನ್ನು ರೂಪಿಸಿಕೊಂಡಿದ್ದು ಪೆರಿಯಡ್ಕ, ಮುಂಡತ್ತೋಡಿ ಶಾಲೆ ಸೇರಿದಂತೆ  ಹಲವಾರೂ ಶಾಲೆಗಳ ನವೀಕರಣದೊಂದಿಗೆ ಬೆಂಚ್ ಡೆಸ್ಕ್ ಹಾಗೂ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡುತ್ತಾ ಸರ್ಕಾರಿ ಶಾಲೆ ಉಳಿಸಿ ಬೆಳೆಸುವತ್ತ ಮಾದರಿ ಕಾರ್ಯಕ್ರಮ ಮಾಡುತ್ತಿದೆ.‌ಅದಲ್ಲದೇ ಬೆಳ್ತಂಗಡಿ ರೋಟರಿ ಕ್ಲಬ್ ,ಸೇರಿದಂತೆ ಹಲವಾರೂ ಸಂಘ ಸಂಸ್ಥೆಗಳು ಬದುಕು ಕಟ್ಟೋಣ ಬನ್ನಿ ತಂಡದೊಂದಿಗೆ     ಕೈ ಜೋಡಿಸುತ್ತಿವೆ    ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯೋಜನೆಗಳನ್ನು  ಹಾಕಿಕೊಂಡಿರುವ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಇವರೊಂದಿಗೆ ಕೈ ಜೋಡಿಸುತ್ತಿರುವ ಸಂಘ ಸಂಸ್ಥೆಗಳ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!