ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಾವು: ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ: ಸೂರಣಗಿಗೆ ನಟ ಯಶ್ ಇಂದು ಭೇಟಿ ಸಾಧ್ಯತೆ

ಬೆಂಗಳೂರು: ನಟ ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೀಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಮೃತಪಟ್ಟ ಈ ಮೂವರ ಗ್ರಾಮಕ್ಕೆ ರಾಕಿಂಗ್ ಸ್ಟಾರ್ ಯಶ್ ಇಂದು ಸಂಜೆ ಭೇಟಿ ನೀಡಲಿದ್ದಾರೆ.

ವಿದೇಶದಿಂದ ಬರುತ್ತಿದ್ದಂತೆಯೇ, ಹೆಲಿಕಾಪ್ಟರ್‌ನಲ್ಲಿ ನಟ ಯಶ್ ಗದಗ ಜಿಲ್ಲೆಗೆ ಆಗಮಿಸಿ, ಅಲ್ಲಿಂದ ಮೃತ ಅಭಿಮಾನಿಗಳ ಮನೆಗೆ ತೆರಳಲಿದ್ದಾರೆ. 3 ಗಂಟೆಗೆ ಹುಬ್ಬಳ್ಳಿ ಏರ್ ಪೋರ್ಟ್  ಗೆ ಬಂದು ಅಲ್ಲಿಂದ 4 ಗಂಟೆಗೆ ಬೈರೋಡ್ ಲಕ್ಷ್ಮೀಶ್ವರಕ್ಕೆ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿದ್ದಾರೆ ಎಂದು ಆಪ್ತ ವಲಯದಿಂದ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಕೊನೆಯುಸಿರೆಳೆದ ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂಬುವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ಸಾಮೂಹಿಕವಾಗಿ ನೆರವೇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!