ಸೂರತ್: ದೇಶದಲ್ಲಿ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆಯ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮಕ್ಕೆ ಅನೇಕ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್ ನ ಸೂರತ್ ನಗರದಲ್ಲಿ ಸೀತಾಮಾತೆಗಾಗಿ ವಿಶೇಷ ಸೀರೆ ತಯಾರಾಗಿದೆ.
ಶರ್ಮಾ ಅವರೊಂದಿಗೆ ಸಮಾಲೋಚಿಸಿ ಸೀರೆಯನ್ನು ಸಿದ್ಧಪಡಿಸಿದ ಜವಳಿ ಉದ್ಯಮಿ ರಾಕೇಶ್ ಜೈನ್, ಈ ಬಟ್ಟೆಯು ಮಾ ಜಾನಕಿಗೆ ಮೀಸಲಾಗಿದೆ ಮತ್ತು ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿರುವ ದೇವಾಲಯಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ. ಸೀರೆಯ ವಿಶೇಷತೆಯನ್ನು ವಿವರಿಸಿದ ಅವರು, ಸೀರೆಯಲ್ಲಿ ಶ್ರೀರಾಮನ ಚಿತ್ರಗಳು ಮತ್ತು ಅದರ ಮೇಲೆ ಅಯೋಧ್ಯೆ ದೇವಾಲಯವನ್ನು ಮುದ್ರಿಸಲಾಗಿದೆ. ಇದನ್ನು ಮಾ ಜಾನಕಿ ಎಂದು ಪೂಜನೀಯವಾಗಿ ಕರೆಯಲಾಗುತ್ತದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಈ ಸೀರೆಯನ್ನು ಕಳುಹಿಸಲಾಗುವುದು ಎಂದಿದ್ದಾರೆ.