ಬೆಳ್ತಂಗಡಿ ಚರ್ಚ್ ರೋಡ್ ಬಳಿ ಹೊತ್ತಿ ಉರಿದ   ಬೈಕ್..!:  ವಾರೀಸುದಾರು, ನಂಬರ್ ಪ್ಲೇಟ್ ಇಲ್ಲದ  ಬೈಕ್  ಮೇಲೆ ಮೂಡಿದ ಅನುಮಾನ ..! 

 

 

ಬೆಳ್ತಂಗಡಿ: ನಂಬರ್ ಪ್ಲೇಟ್ ಇಲ್ಲದ ಬೈಕೊಂದು ಹೊತ್ತಿ ಉರಿದ ಘಟನೆ ಬೆಳ್ತಂಗಡಿ ತಾಲೂಕಿನ ಚರ್ಚ್ ರೋಡ್ ಬಳಿ ಡಿ 31 ರಂದು ಮಧ್ಯಾಹ್ನ ನಡೆದಿದೆ.
ಬೆಳ್ತಂಗಡಿ ಚರ್ಚ್ ರೋಡ್ ನ ಸೈಂಟ್ ತೆರೇಸಾ ಹೈಸ್ಕೂಲು ಎದುರು ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೈಕೊಂದು ಹೊತ್ತಿ ಉರಿಯುತಿದ್ದು ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅದರೆ ಬೈಕ್ ಗೆ ಸಂಬಂಧಿಸಿದ ವಾರೀಸುದಾರರು ಯಾರೂ ಅಲ್ಲಿ ಇರಲಿಲ್ಲ ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

 

 

ಸ್ಥಳದಲ್ಲಿ  ವಾರೀಸುದಾರರು  ಹಾಗೂ ನಂಬರ್  ಪ್ಲೇಟ್  ಇಲ್ಲದ ಬೈಕ್ ಮೇಲೆ ಅನುಮಾನ ಮೂಡಿದ್ದು ಎಲ್ಲಿಂದಲೋ ನಂಬರ್ ಪ್ಲೇಟ್ ತೆಗೆದು ಬೈಕ್ ಕದ್ದು ತರುವ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಈ ಸಮಯದಲ್ಲಿ ಬೈಕ್ ಅಲ್ಲೆ ಬಿಟ್ಟು ಪರಾರಿಯಾಗಿರಬಹುದು ಅಥವಾ ಏನಾದರೂ ಗಾಯಗಳಾಗಿ ತುರ್ತು  ಚಿಕಿತ್ಸೆಗಾಗಿ ಆಸ್ಪತ್ರೆಗೆ ಬೈಕ್ ಬಿಟ್ಟು ತೆರಳಿರುವ ಬಗ್ಗೆಯೂ   ಅನುಮಾನಿಸಲಾಗಿದೆ.ಒಂದು ವಾರಗಳ ಹಿಂದೆ ಬೈಕೊಂದು ಕಳ್ಳತನವಾಗಿದ್ದು ಅದೇ ಬೈಕ್ ಆಗಿರಬಹುದೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತಿದ್ದಾರೆ.

error: Content is protected !!