ಪ್ರಜಾಪ್ರಕಾಶ ನ್ಯೂಸ್ ವರದಿ ಫಲಶ್ರುತಿ: ಚರಂಡಿ ಕ್ಯೂರಿಂಗ್, ಸೇರಿದಂತೆ ರಸ್ತೆ ಬದಿ ನೀರು ಸಿಂಪಡಣೆ ಪ್ರಾರಂಭ:

 

 

 

ಬೆಳ್ತಂಗಡಿ:ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಭರದಿಂದ ಸಾಗುತಿದ್ದು ಅಧಿಕಾರಿಗಳ , ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿಯು ಅವ್ಯವಸ್ಥೆಯಿಂದಾಗಿ ಕೂಡಿದ್ದು ದೂಳಿನಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ರಸ್ತೆಯಲ್ಲಿ ಬಸ್, ದ್ವಿಚಕ್ರ ಸೇರಿದಂತೆ ಇತರ ವಾಹನಗಳಲ್ಲಿ ಸಂಚರಿಸದಂತಾಗಿದೆ.

 

 

ರೋಗದ ಭೀತಿ ಎದುರಿಸುವಂತಾಗಿದೆ.ಅದೇ ರೀತಿ ಸಿಮೆಂಟ್ ನಿಂದ ನಿರ್ಮಾಣವಾಗುತ್ತಿರುವ ಸಿ ಸಿ ಚರಂಡಿಗೆ ಕ್ಯೂರಿಂಗ್ ಗಾಗಿ ಮಳೆ ನೀರು ಮಾತ್ರ ಗತಿ, ನೀರು ಸಿಂಪಡಣೆ ಮಾಡುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರ ಕಾಳಜಿ ಹಾಗೂ ಹಿತದೃಷ್ಟಿಯಿಂದ “ಪ್ರಜಾಪ್ರಕಾಶ ನ್ಯೂಸ್” ಮಂಗಳವಾರ ವಿಸ್ಕ್ರತ ವರದಿ ಪ್ರಕಟಿಸಿತ್ತಲ್ಲದೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸಬೇಕು ಎಂಬ ಬಗ್ಗೆ ಉಲ್ಲೇಖಿಸಿ ಪ್ರಕಟಿಸಲಾಗಿತ್ತು. “ಪ್ರಜಾಪ್ರಕಾಶ ನ್ಯೂಸ್” ವರದಿ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಿ ಸಿ ಚರಂಡಿ ಕಾಮಗಾರಿಗೆ ಕ್ಯೂರಿಂಗಾಗಿ ಹಾಗೂ ದೂಳಿಗಾಗಿ ರಸ್ತೆ ಬದಿ ಟ್ಯಾಂಕರ್ ಮೂಲಕ ನೀರು ಹಾಕಲು ಪ್ರಾರಂಭಿಸಿದ್ದಾರೆ.

 

 

ಅದಲ್ಲದೇ ಇನ್ನೆರಡು ದಿನಗಳಲ್ಲಿ ಹೆಚ್ಚಿನ ಟ್ಯಾಂಕರ್ ತರಿಸಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಅನುಭವಿಸುತಿದ್ದ ತೊಂದರೆಯ ಬಗ್ಗೆ ವರದಿ ಪ್ರಕಟಿಸಿದ “ಪ್ರಜಾಪ್ರಕಾಶ ನ್ಯೂಸ್” ಗೆ ಹಲವಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ:

 

ಬೆಳ್ತಂಗಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ದೂಳಿನಿಂದಾಗಿ ಸಂಚಾರಿಸಲು ಪರದಾಡುವ ವಾಹನ ಸವಾರರು: ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಡಸ್ಟ್ ಅಲರ್ಜಿ ಭಯ:

 

error: Content is protected !!