ಡಿ.17 ವೇಣೂರಿನಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ-2024 ರ ಪ್ರಯುಕ್ತ ಕಾರ್ಯಕ್ರಮ

ವೇಣೂರು : ಭಗವಾನ್ ಶ್ರೀ ಬಾಹುಬಲಿ ಸ್ವಾಮಿ  ಮಹಾಮಸ್ತಕಾಭಿಷೇಕ ಮಹೋತ್ಸವ-2024 ರ ಪ್ರಯುಕ್ತ ಡಿ.17ರಂದು ವೇಣೂರು ಭರತೇಶ ಸಮುದಾಯ ಭವನಲ್ಲಿ ‘ಜನಮಂಗಲ ಕಾರ್ಯಕ್ರಮ’ ಉಚಿತ ಬೃಹತ್ ವೈದ್ಯಕೀಯ ಶಿಬಿರ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 09 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಉಚಿತ ವೈದ್ಯಕೀಯ ಶಿಬಿರ ನಡೆಯಲಿದ್ದು ಸಾಮಾನ್ಯ ಆರೋಗ್ಯ ತಪಾಸಣೆ , ದಂತ ಚಿಕಿತ್ಸೆ, ಹೃದಯ ರೋಗ ತಪಾಸಣೆ, ಆಯುರ್ವೇದ ಚಿಕಿತ್ಸೆ, ಸ್ತನರೋಗ ತಪಾಸಣೆ & ಸ್ಕ್ರೀನಿಂಗ್, ರಕ್ತ ಪರೀಕ್ಷೆ, ಮೂಳೆ ಸಾಂದ್ರತೆಯ ಪರೀಕ್ಷೆ ನಡೆಯಲಿ ಎಂದರು.

ಶಿಬಿರವನ್ನು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ| ಪದ್ಮನಾಭ ಕಾಮತ್ ಉದ್ಘಾಟಿಸಲಿದ್ದು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೇಮಯ್ಯ ಕುಲಾಲ್, ಅಧ್ಯಕ್ಷರು, ಗ್ರಾಮ ಪಂಚಾಯತ್, ವೇಣೂರು, ಸುಂದರ ಹೆಗ್ಡೆ ಬಿ.ಇ., ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂಘ ನಿ. ವೇಣೂರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಮಹಾಮಸ್ತಕಾಭಿಷೇಕ ಸ್ವಾಗತ ಸಮಿತಿ ಸಂಚಾಲಕ ಶಿವಪ್ರಸಾದ್ ಅಜಿಲ, ಕೋಶಾಧಿಕಾರಿ ನಿಲೇಶ್ ಕಂಬಳಿ, ಜೊತೆ ಕಾರ್ಯದರ್ಶಿ ಡಾ.ಜಗದೀಶ್, ಸಂಚಾಲಕ ಶಾಂತಿ ಪ್ರಸಾದ್ ಉಪಸ್ಥಿತರಿದ್ದರು.

error: Content is protected !!