ಶಬರಿಮಲೆ ದರ್ಶನದ ಸಮಯ ಒಂದು ಗಂಟೆ ವಿಸ್ತರಣೆ: ಬೆಟ್ಟದಲ್ಲಿ ಭಕ್ತರ ಸುರಕ್ಷಿತ ದರ್ಶನಕ್ಕಾಗಿ ಡೈನಾಮಿಕ್ ಕ್ಯೂ-ಕಂಟ್ರೋಲ್ ವ್ಯವಸ್ಥೆ

ಕೇರಳ: ಶಬರಿಮಲೆ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಕಾರಣದಿಂದ ದರ್ಶನದ ಸಮಯ ಒಂದು ಗಂಟೆ ವಿಸ್ತರಣೆಗೊಳಿಸಲಾಗಿದೆ.

ವರ್ಚುವಲ್ ಕ್ಯೂ ಮೂಲಕ ದಿನನಿತ್ಯ 90 ಸಾವಿರ ಹಾಗೂ ಸ್ಪಾಟ್ ಬುಕ್ಕಿಂಗ್ ಮೂಲಕ ಸುಮಾರು 30 ಸಾವಿರ ಬುಕ್ಕಿಂಗ್ ಆಗುತ್ತಿದ್ದು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಟ್ಟಿರುವ 18 ಮೆಟ್ಟಿಲುಗಳನ್ನು ಹತ್ತಲು ತೊಂದರೆಯುಂಟಾಗುತ್ತಿದೆ. ಹೀಗಾಗಿ ಈಗ ಮಧ್ಯಾಹ್ನ 3ರಿಂದ ರಾತ್ರಿ 11ರ ವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡಬಹುದಾಗಿದೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ನೀರು, ಬಿಸ್ಕತ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

2ತಿಂಗಳ ಕಾಲ ನಡೆಯುವ ಮಣಿಕಂಠನ ಮಹಾದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು ಈ ಬಾರಿ ರಾಜ್ಯ ಸರ್ಕಾರವು ಬೆಟ್ಟದಲ್ಲಿ ಭಕ್ತರ ಸುರಕ್ಷಿತ ದರ್ಶನಕ್ಕಾಗಿ ಡೈನಾಮಿಕ್ ಕ್ಯೂ-ಕಂಟ್ರೋಲ್ ವ್ಯವಸ್ಥೆಯನ್ನು ಪರಿಚಯಿಸಿದೆ.

error: Content is protected !!