
ಹೈದರಾಬಾದ್ : ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಪೂರ್ಣ ಚಿತ್ರಗಳನ್ನು ಸೆರೆ ಹಿಡಿದು ಭೂಮಿಗೆ ಕಳುಹಿಸಿದೆ.
ನವೆಂಬರ್ 20 ರಂದು SUIT ಪೇಲೋಡ್ ಅನ್ನು ಕಾರ್ಯಾಚರಣೆ ನಡೆಸಲು ಸಕ್ರಿಯಗೊಳಿಸಲಾಗಿತ್ತು. ಇದು ಪೂರ್ವ ನಿಯೋಜನೆಯಂತೆ ಡಿಸೆಂಬರ್ 6 ರಂದು ತನ್ನ ಮೊದಲ ಸೂರ್ಯನ ಚಿತ್ರಗಳನ್ನು ಸೆರೆಹಿಡಿಯಿತು. ಈ ಅಭೂತಪೂರ್ವ ಚಿತ್ರಗಳನ್ನು 11 ವಿಭಿನ್ನ ಫಿಲ್ಟರ್‌ಗಳನ್ನು ಬಳಸಿ ತೆಗೆಯಲಾಗಿದ್ದು ಮೊದಲ ಬಾರಿಗೆ ಪೂರ್ಣ ಡಿಸ್ಕ್ ಸೂರ್ಯನನ್ನು ಇದು ತೋರಿಸುತ್ತದೆ.

ಸೂರ್ಯನ ಕಲೆಗಳು, ಪ್ಲೇಜ್ ಮತ್ತು ಸೂರ್ಯನ ಶಾಂತ ಪ್ರದೇಶಗಳ ಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಲು ಇದು ನೆರವು ನೀಡಲಿದೆ ಎಂದು ಇಸ್ರೋ ತಿಳಿಸಿದೆ. ಜೊತೆಗೆ ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ಒಳನೋಟಗಳನ್ನು ಇದು ಒದಗಿಸುತ್ತದೆ ಎಂದಿದೆ.