ದ್ವಿಚಕ್ರ ವಾಹನ ಚಲಾಯಿಸುತ್ತಿರುವಾಗಲೇ ಕೈ ಮೇಲೆ ಹರಿದಾಡಿದ ಹಾವು..!!!ಸವಾರ ತಬ್ಬಿಬ್ಬು.!, ಹೆದ್ದಾರಿಯಲ್ಲೇ ವಾಹನ ಬಿಟ್ಟು ಓಡಿದ ಸವಾರ…!!! ಕೆಲ ಕಾಲ ಟ್ರಾಫಿಕ್ ಜಾಮ್, ಸ್ಥಳೀಯರಿಂದ ಹಾವಿನ ರಕ್ಷಣೆ ಮಳೆಗಾಲದಲ್ಲಿ ಬೆಚ್ಚಗಿನ ಆಶ್ರಯ ಅರಸುವ ಉರಗಗಳು, ಇರಲಿ ಎಚ್ಚರ:

 

ಬೆಳ್ತಂಗಡಿ: ‘ಆತ ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಉಜಿರೆಯ ಕಡೆ ತೆರಳುತ್ತಿದ್ದ, ಲಾಯಿಲಾ ಬಳಿ ಕೈಗೆ  ತಂಪಾದ ವಸ್ತು ತಾಗಿದ ಅನುಭವ ಆಗಿದ್ದು, ಮಳೆಯ ನೀರು ಇರಬಹುದು ಎಂದು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಆದರೆ ಕಾಶಿಬೆಟ್ಟು ಬಳಿ ಹ್ಯಾಂಡಲ್ ಬಳಿ ಹಾವು ಕಂಡಿದ್ದು ತಬ್ಬಿಬ್ಬಾಗಿ ನಡುರಸ್ತೆಯಲ್ಲೇ ವಾಹನ ಅಡ್ಡಲಾಗಿ ಹಾಕಿ, “ಬದುಕಿದೆಯಾ ಬಡ ಜೀವವೇ” ಎಂಬಂತೆ ತಮ್ಮ ಜೀವ ರಕ್ಷಣೆಗಾಗಿ ದೂರ ಓಡಿದ್ದಾರೆ…’

 

 

ಹೌದು… ಬೆಳ್ತಂಗಡಿ ದ್ವಿಚಕ್ರ ವಾಹನದೊಳಗೆ ಅವಿತಿದ್ದ ಬೃಹತ್ ಗಾತ್ರದ ಹಾವೊಂದು ಸಂಚಾರದ ವೇಳೆಯೇ ಹೊರಬಂದು ಸವಾರ ವಾಹನ ನಡು ರಸ್ತೆಯಲ್ಲೆ ವಾಹನವನ್ನು  ಬಿಟ್ಟು ಓಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಬೆಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಉಪ್ಪಿನಂಗಡಿಯಿಂದ ದ್ವಿಚಕ್ರ ವಾಹನದಲ್ಲಿ ಕಕ್ಕಿಂಜೆಗೆ ಸಂಬಂಧಿಕರ ಮನೆಗೆ ರಾತ್ರಿ ಸುಮಾರು 8.30 ರ ಸುಮಾರಿಗೆ ಇಬ್ಬರು ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಕಾಶಿಬೆಟ್ಟು ಎಂಬಲ್ಲಿ ಸವಾರನ ಕೈಗೆ ಏನೊ ತಂಪಾದ ವಸ್ತು ತಾಗುತ್ತಿದ್ದ ಅನುಭವ ಆಗಿದ್ದು, ಸ್ವಲ್ಪ ಹೊತ್ತಲ್ಲೇ ಹಾವೊಂದು ಹ್ಯಾಂಡಲ್ ಬಳಿ ಕಂಡಿದ್ದು, ಗಾಬರಿಗೊಂಡ ಸವಾರ ತಕ್ಷಣ ದ್ವಿಚಕ್ರ ವಾಹನವನ್ನು ನಡು ರಸ್ತೆಯಲ್ಲೇ ಅಡ್ಡ ಹಾಕಿದ್ದಾರೆ.

 

ಅದರೆ ವಾಹನವನ್ನು ನಡು ರಸ್ತೆಯಿಂದ ತೆಗೆಯಲು ಹಿಂಜರಿದ ಕಾರಣ ಕೆಲಹೊತ್ತು ವಾಹನ ಸಂಚಾರಕ್ಕೂ ತೊಡಕ್ಕಾಯಿತು. ನಂತರ ಹೇಗೂ ದ್ವಿ ಚಕ್ರ ವಾಹನವನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸ್ಥಳೀಯರು ದ್ವಿಚಕ್ರ ವಾಹನದಲ್ಲಿ ಸೇರಿಕೊಂಡಿದ್ದ ಹಾವನ್ನು ಹರಸಾಹಸ ಪಟ್ಟು ಹೊರ ತೆಗೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸವಾರ ಲಾಯಿಲ ಬಳಿ ಕೈಗೆ ತಂಪು ವಸ್ತುವೊಂದು ತಾಗಿದ ಅನುಭವ ಆಗಿದ್ದು.‌ಮಳೆ ನೀರು ಎಂದು ಕೊಂಡಿದ್ದೆ , ಅದರೆ ಕಾಶಿಬೆಟ್ಟು ಬಳಿ ಬರುವಾಗ ಒಮ್ಮೆಲೆ ಹಾವು ಹ್ಯಾಂಡಲ್ ಬಳಿಯಿಂದ ಹೊರ ಬಂದಾಗ ಭಯದಲ್ಲಿ ರಸ್ತೆ ನಡುವಲ್ಲೇ ವಾಹನವನ್ನು ಅಡ್ಡ ಹಾಕಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ,ಅದೇ ರೀತಿ ತಕ್ಷಣ ಸ್ಥಳೀಯರು , ಭಯಗೊಂಡಿದ್ದ ನನ್ನನ್ನು ಸಮಾಧಾನಿಸಿ ಹಾವನ್ನು ವಾಹನದಿಂದ ತೆಗೆಯಲು ತುಂಬಾ ಕಷ್ಟ ಪಟ್ಟು ನನಗೆ ತುಂಬಾ ಉಪಕಾರ ಮಾಡಿದ್ದಾರೆ ಎಂದಿದ್ದಾರೆ. ಒಂದು ವೇಳೆ ಭಯದಲ್ಲಿ ವಾಹನ ರಸ್ತೆಯಲ್ಲಿ ಬಿಟ್ಟು ಹೋಗುವ ವೇಳೆ ಅಥವಾ ಗಾಬರಿಯಲ್ಲಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯುತಿದ್ದರೆ , ಹಾವು ಕಚ್ಚುತಿದ್ದರೆ ಅಪಾಯ ಸಂಭವಿಸುತಿತ್ತು ಅದ್ದರಿಂದ ದ್ವಿಚಕ್ರ ವಾಹನ ಸವಾರರು ಜಾಗ್ರತೆ ವಹಿಸಬೇಕಾಗಿದೆ.ಎಲ್ಲೋ ವಾಹನ ನಿಲ್ಲಿಸಿದ್ದಲ್ಲಿ ಹಾವು ದ್ವಿಚಕ್ರ ವಾಹನದ ಎದುರಿನ ಡೂಂ ಒಳಗೆ ಸೇರಿಕೊಂಡಿರಬಹುದು ಎಂದಿದ್ದಾರೆ.

error: Content is protected !!