ಬೆಳ್ತಂಗಡಿ: ಘನತೆ-ಗೌರವದಿಂದ ಬದುಕುವ ಹಕ್ಕು ಎಲ್ಲರಿಗೂ ಇದೆ, ವಿಶೇಷ ಮಕ್ಕಳ ಸೇವೆ ಶ್ಲಾಘನೀಯ, ಇಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಗೌರವವನ್ನು ಸಲ್ಲಿಸುತ್ತೇನೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಧೀಶ ವಿಜಯೇಂದ್ರ ಟಿ. ಹೆಚ್ ಹೇಳಿದ್ದಾರೆ.
ಅವರು ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನ ಆಚರಣೆ ಮತ್ತು ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮ ಎಂದರೆ ದಯೇ, ಒಂದು ಒಳ್ಳೆಯ ಪರಿಸರವನ್ನು ನಾವು ಉಂಟುಮಾಡಬೇಕು, ಎಲ್ಲಾರಿಗೂ ಸರಿಸಮಾನಾದ ಅವಕಾಶಗಳು ಸಿಗುವಂತಾಗಬೇಕು, ವಿಶೇಷ ಮಕ್ಕಳಿಗೆ ಸಿಗುವ ಎಲ್ಲಾ ಸರಕಾರದ ಸೌಲಭ್ಯಗಳು ಸಿಗಲಿ, ಈ ಅದ್ಭುತವಾದ ಸೇವೆಗೆ ನ್ಯಾಯಲಯ ಮತ್ತು ವಕೀಲರ ಸಂಘ ಸಹಕಾರ ಮಾಡಲು ಸದಾ ಸಿದ್ಧ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮತ್ತು ಮಕ್ಕಳ ಪೋಷಕರಿಗೂ ನಾನು ಗೌರವವನ್ನು ಸಲ್ಲಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ವಕೀಲರ ಸಂಘ, ಬೆಳ್ತಂಗಡಿ ಇದರ ಅಧ್ಯಕ್ಷ ವಸಂತ ಮರಕಡ ಮಾತನಾಡಿ ವಿಶೇಷ ಚೇತನರ ಸೇವೆ ಮಾಡುತ್ತಿರುವ ಎಲ್ಲಾರಿಗೂ ಧನ್ಯವಾದ, ಈ ಮಕ್ಕಳನ್ನು ಅರ್ಥೈಸಿ ಸೇವೆ ಮಾಡಿದರೆ ಅದೇ ಶ್ರೇಷ್ಠ ಕಾರ್ಯ. ದಿವ್ಯಾಂಗ ಮಕ್ಕಳ ಸೇವೆ ದೇವರ ಸೇವೆಯಾಗಿದೆ, ನ್ಯಾಯಾಲಯ ಮತ್ತು ವಕೀಲರ ಸಂಘವು ಸಹಾಯ ಮಾಡಲು ಸದಾ ಸಿದ್ದ ಎಂದರು.
ಸಂಸ್ಥೆಯ ಸಂಚಾಲಕರು ವಂದನೀಯ ಫಾದರ್ ವಿನೋದ್ ಮಸ್ಕರೇನ್ಹಸ್‌ರವರು ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಸರಕಾರದಿಂದ ಶೇಖಡ 3% ಮಿಸಲಾತಿ ಇದೆ, ಪ್ರತಿಯೊಬ್ಬರಿಗೂ ಘನತೆ-ಗೌರವದಿಂದ ಬದುಕು ಹಕ್ಕು ಇದೆ, ವಿಶೇಷ ಮಕ್ಕಳಿಗೆ ಎಲ್ಲಾ ಹಕ್ಕುಗಳು ಸಿಗುವಂತಾಗಲಿ, ಅವರಿಗೆ ಗೌರವಯುತವಾದ, ಯೋಗ್ಯ ಮಗು ಸ್ನೇಹಿ ಪರಿಸರ, ಚಿಕಿತ್ಸೆ ಎಲ್ಲಾ ರೀತಿಯ ಸೌಲಭ್ಯಗಳು, ಸೌಕರ್ಯಗಳು ಒದಗಿಸುವಲ್ಲಿ ಸಂಸ್ಥೆಯು ಸದಾ ದುಡಿಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವೀನ್ ಬಿ. ಕೆ ಪ್ರಧಾನ ಕಾರ್ಯದರ್ಶಿಗಳು, ವಕೀಲರ ಸಂಘ, ಬೆಳ್ತಂಗಡಿ ಮತ್ತು ದಯಾ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಸಂಧ್ಯಾ ಸ್ವಾಗತಿಸಿ, ಸಹ ಶಿಕ್ಷಕಿ ಚಿರಂಜಿವಿ ಧನ್ಯವಾದವಿತ್ತರು.