ಡಿ.03 ಬಂಟರ ಭವನ ಗುರುವಾಯನಕೆರೆಯಲ್ಲಿ ಬಂಟೋತ್ಸವ – 2023 ಕಾರ್ಯಕ್ರಮ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ ದ.ಕ, ತಾಲೂಕು ಮಹಿಳಾ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟೋತ್ಸವ – 2023 ಕಾರ್ಯಕ್ರಮ ಡಿ.03 ರಂದು ಬಂಟರ ಭವನ ಗುರುವಾಯನಕೆರೆಯಲ್ಲಿ ನಡೆಯಲಿದೆ.


ಸದಾಶಿವ ಶೆಟ್ಟಿ ಕನ್ಯಾನ ಸಿಎಂಡಿ ಹೇರಂಭಾ ಇಂಡಸ್ಟ್ರೀಸ್ ಮುಂಬಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎ. ಸದಾನಂದ ಶೆಟ್ಟಿ ಶ್ರೀದೇವಿ ಎಜುಕೇಶನಲ್ ಟ್ರಸ್ಟ್, ಮಂಗಳೂರು, ಕೆ. ಪ್ರಕಾಶ್ ಶೆಟ್ಟಿ ಎಂ.ಆರ್.ಜಿ. ಗ್ರೂಪ್ ಬೆಂಗಳೂರು, ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಅಜಿತ್ ಕುಮಾರ್ ರೈ, ಮಾಲಾಡಿ ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಡಾ| ಮೋಹನ್ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡಬಿದ್ರೆ ತೋನ್ಸೆ ಆನಂದ ಎಂ. ಶೆಟ್ಟಿ, ಸಿಎಂಡಿ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬಯಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಬಂಟ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

error: Content is protected !!