ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ: ನ.26 ತಾಲೂಕು ಮಟ್ಟದ ಕ್ರೀಡಾ ಕೂಟ

ಬೆಳ್ತಂಗಡಿ: ತಾಲೂಕು ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ನ.26ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕರ್ನಾಟಕ ಮರಾಟಿ ಫೆಡರೇಶನ್ (ರಿ.) ಅಧ್ಯಕ್ಷ ಸುಂದರ ನಾಯ್ಕ ಐ.ಎಫ್.ಎಸ್. ತಾ.ಮ.ಸ.ಸೇ.ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ ಬಡಕೋಡಿ, ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ನಿವೃತ ಆಯುಕ್ತ ಚಂದ್ರಕುಮಾರ್, ಕಾರ್ಕಳ ಅಜೆಕಾರು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ದೇವಪ್ಪ ನಾಯ್ಕ ಮೊದಲಾದವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ ಕೇಲ್ತಡ್ಕ ಭಾಗವಹಿಸಲಿದ್ದಾರೆ.

ಗುಂಪು ಸ್ಪರ್ಧೆಗಳು:
ಪುರುಷರಿಗೆ: ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ
ಮಹಿಳೆಯರಿಗೆ: ತ್ರೋಬಾಲ್, ಹಗ್ಗಜಗ್ಗಾಟ
ವಿಜೇತರಿಗೆ ನಗದು ಬಹುಮಾನ ಹಾಗೂ ಮರಾಟಿ ಟ್ರೋಫಿ ಲಭಿಸಲಿದೆ.

ವೈಯಕ್ತಿಕ ವಿಭಾಗ:
5 ವರ್ಷದ ಒಳಗಿನ ಮಕ್ಕಳಿಗೆ ಕಪ್ಪೆ ಜಿಗಿತ, ಬಾಲ್ ಪಾಸಿಂಗ್, ಬಾಟಲಿಗೆ ನೀರು ತುಂಬಿಸುವುದು, 5ರಿಂದ 10 ವರ್ಷ, 10ರಿಂದ 14ವರ್ಷದೊಳಗೆ, 14 ವರ್ಷದಿಂದ ಮೆಲ್ಪಟ್ಟ ಬಾಲಕರಿಗೆ ಹಾಗೂ ಬಾಲಕಿಯರಿಗೆ 100 ಮೀ. ಓಟ, ಸಂಗೀತ ಕುರ್ಚಿ, ಮೂರು ಕಾಲಿನ ಓಟ, ಗೋಣಿ ಚೀಲ ಓಟ ನಡೆಯಲಿದೆ.

ವಿಶೇಷ ಸೂಚನೆ:
ಭಾಗವಹಿಸುವವರು ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿ ಕಡ್ಡಾಯ ನೀಡಬೇಕಿದೆ.

error: Content is protected !!