ಜೆರುಸಲೇಂ/ಗಾಜಾ: ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯುದ್ದ ಸಾರಿದ್ದು, ಹಮಾಸ್ ದಾಳಿ ಬಳಿಕ ಇದೀಗ ಗಾಜಾ ಪಟ್ಟಿಯಲ್ಲಿ ಕಾಳಗ ನಡೆಯುತ್ತಿದೆ.
ಗಾಜಾ ಪಟ್ಟಿಯಲ್ಲಿನ ಸಂಘರ್ಷದಲ್ಲಿ ಈವರೆಗೆ 2 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಿದೇಶಿ ಪ್ರಜೆಗಳು ಸೇರಿದ್ದು ಅಮೆರಿಕದ 14, ಫ್ರಾನ್ಸ್ ನ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಕನಿಷ್ಠ 2,806 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಸ್ರೇಲಿ ಪಡೆಗಳ 50 ರಿಂದ 100 ಸದಸ್ಯರು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಹಮಾಸ್ ಉಗ್ರರು ಸೆರೆಹಿಡಿದಿದ್ದು, ಬಲವಂತವಾಗಿ ಗಾಜಾಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಸಶಸ್ತç ಗುಂಪುಗಳು ಈ ಎಲ್ಲರನ್ನು ಬಲವಂತವಾಗಿ ಸೆರೆಯಲ್ಲಿಟ್ಟುಕೊಂಡಿವೆ ಎಂದು ಇಸ್ರೇಲಿ ಮೂಲಗಳು ತಿಳಿಸಿದೆ.
ಇಸ್ರೇಲ್‌ನ ನಿರಂತರ ದಾಳಿಯಿಂದ ಗಾಜಾಪಟ್ಟಿ ರಕ್ತಸಿಕ್ತವಾಗಿದ್ದು, ಜೌಷಧ, ವೈದ್ಯಕೀಯ ವಸ್ತುಗಳು, ರಕ್ತನಿಧಿ ಪೂರೈಕೆಗಳ ಜೊತೆಗೆ, ವಿದ್ಯುತ್ ಜನರೇಟರ್‌ಗಳ ಕೊರತೆ ಎದುರಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಗಾಜಾ ಪಟ್ಟಿಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸಾಮೂಹಿಕ ವಲಸೆ ಆರಂಭವಾಗಿದ್ದು 2ಲಕ್ಷÆ ಅಧಿಕ ಮಂದಿ ವಲಸೆ ಆರಂಭಿಸಿದ್ದಾರೆ. ಸ್ಥಳಾಂತರಗೊಂಡವರಲ್ಲಿ, ಒಂದು ಲಕ್ಷಕ್ಕೂ ಹೆಚ್ಚು ಜನರು ವಿಶ್ವಸಂಸ್ಥೆ ರಿಲೀಫ್ ವರ್ಕ್ಸ್ ಏಜೆನ್ಸಿ – ಯುಎನ್‌ಆರ್‌ಡಬ್ಲ್ಯುಎ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.