ದಡದಲ್ಲಿದ್ದ ಮೀನುಗಾರಿಕಾ ಬೋಟ್‍ನಲ್ಲಿ ಬೆಂಕಿ ಅವಘಡ:ಇತರೇ ಬೋಟುಗಳಿಗಿದ್ದ ಅಪಾಯ ತಪ್ಪಿದ್ದೇ ರೋಚಕ..!

ಮಂಗಳೂರು: ದಡದಲ್ಲಿದ್ದ ಬೋಟು ಒಂದರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ಅ.10ರಂದು ಮುಂಜಾನೆ ಸುಮಾರು 4.30ಕ್ಕೆ ನಡೆದಿದೆ.

ಅರುಣ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ರಭಸಕ್ಕೆ ಬೋಟು ನದಿ ನೀರಿನ ಮಧ್ಯೆ ಸಾಗಿದೆ. ಇದರಿಂದಾಗಿ ಇತರೇ ಬೋಟುಗಳಿಗಿದ್ದ ಅಪಾಯ ತಪ್ಪಿದೆ. ಬೋಟ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಕದ್ರಿ, ಪಾಂಡೇಶ್ವರ್ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಬೋಟ್ ಬೆಂಕಿಗೆ ಆಹುತಿಯಾಗಿದ್ದರಿಂದ ಲಕ್ಷಾಂತರ ಮೌಲ್ಯದ ನಷ್ಟ ಉಂಟಾಗಿದೆ.

error: Content is protected !!