ಉಜಿರೆ: ರಿಕ್ಷಾ, ಟೆಂಪೊ, ಲಾರಿ ನಡುವೆ ಅಪಘಾತ : ಮೂವರಿಗೆ ಗಾಯ..!

ಬೆಳ್ತಂಗಡಿ: ರಿಕ್ಷಾ, ಟೆಂಪೊ,ಲಾರಿ ನಡುವೆ ನಡೆದ ಅಪಘಾತದಲ್ಲಿ   ಮೂವರು ಗಾಯಗೊಂಡ ಘಟನೆ ಸೆ.13ರಂದು ಉಜಿರೆ ಸಮೀಪದ ಟಿಬಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಳ್ತಂಗಡಿ ಯಿಂದ ಉಜಿರೆ ಕಡೆಗೆ ಹೋಗುತಿದ್ದ  ಕಾಂಕ್ರೀಟ್ ಮಿಶ್ರಣದ ಲಾರಿಯ ಚಾಲಕ ನಿಧಾನಗೊಳಿಸಿದಾಗ   ಅದರ ಹಿಂದೆ ಬರುತಿದ್ದ   ರಿಕ್ಷಾಕ್ಕೆ   ಹಿಂಬದಿಯಿಂದ ಟೆಂಪೊ ಡಿಕ್ಕಿ ಹೊಡೆದಿದೆ. ರಿಕ್ಷಾ ಎದುರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಜಖಂ ಗೊಂಡು ರಿಕ್ಷಾ ಡ್ರೈವರ್ ಸಹಿತ ಮೂವರಿಗೆ ಗಾಯಗಳಾಗಿವೆ. ಗಾಯಗಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಬ್ಬರು ಗಂಭೀರ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

error: Content is protected !!