ಉಜಿರೆ:ಮುರಿದು ಬಿದ್ದ ಸರ್ಕಾರಿ ಶಾಲಾ ಮೇಲ್ಚಾವಣಿ: ತಪ್ಪಿದ ಭಾರೀ ದುರಂತ..!

ಬೆಳ್ತಂಗಡಿ: ಸರಕಾರಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಉಜಿರೆ ಬಳಿ ನಡೆದಿದೆ.

ಉಜಿರೆ ಗ್ರಾಮದ ಹಳೇ ಪೇಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬಿದಿದ್ದು ಮಕ್ಕಳು ಇಲ್ಲದ ವೇಳೆ ಈ ಘಟನೆ ನಡೆದಿರುವುದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ಈ ಶಾಲೆಯ ಹಳೆಯ ಹಂಚಿನ ಮೇಲ್ಛಾವಣಿ ಸಭಾ ಭವನವು ಕಳೆದ ಹಲವು ಸಮಯಗಳಿಂದ ಬೀಳುವ ಸ್ಥಿತಿಯಲ್ಲಿ ಇತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ದುರಸ್ತಿಗಾಗಿ ತಿಳಿಸಿದರೂ, ಈ ಬಗ್ಗೆ ಗಮನ ಹರಿಸದೇ ಇದ್ದುದರಿಂದ ಶಾಲೆ ಕುಸಿದು ಬಿದ್ದಿದೆ. ಒಂದು ವೇಳೆ ಶಾಲಾ ಸಮಯದಲ್ಲಿ ಕುಸಿದು ಬೀಳುತಿದ್ದರೆ ದೊಡ್ಡ ದುರಂತವೊಂದು ಸಂಭವಿಸುತಿತ್ತು. ಅದೃಷ್ಟವಶಾತ್ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದ್ದರಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

 

ಸರಕಾರಿ ಶಾಲೆಗೆ ಬೇಕಾಗಿದೆ ಕಾಯಕಲ್ಪ

ಅದೆಷ್ಟೋ ಸಾವಿರ  ಮಕ್ಕಳು ಕಲಿತ  ಇಂತಹ ಸರಕಾರಿ ಶಾಲೆಯ ದುರಸ್ಥಿಗೆ ಕ್ರಮ  ಕೈಗೊಂಡು ಶಾಲೆಗಳನ್ನು ಉಳಿಸಿ ಬೆಳೆಸುವತ್ತ ಕ್ರಮ ಜನಪ್ರತಿನಿದಿಗಳು, ಸಂಘ ಸಂಸ್ಥೆಗಳು ಮುಂದಾಗಬೇಕಿದೆ. ಅದ್ದರಿಂದ ಶೀಘ್ರವೇ ಈ ಶಾಲೆ ನವೀಕರಣಗೊಂಡು ಮಕ್ಕಳು ಆತಂಕವಿಲ್ಲದೆ ಶಾಲೆಗೆ ಬರುವಂತಾಗಲಿ ಎಂಬುವುದೇ ಪ್ರಜಾಪ್ರಕಾಶ ನ್ಯೂಸ್ ಆಶಯವಾಗಿದೆ.

error: Content is protected !!