ಬೆಳ್ತಂಗಡಿ : ಪಟ್ರಮೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆ ಉಪ್ಪಿನಂಗಡಿ ಅರಣ್ಯ ಇಲಾಖೆಯ ಕಾರ್ಯಾಚರಣೆ ;ಮೂವರು ಆರೋಪಿಗಳ ಬಂಧನ

 

 

 

 

ಬೆಳ್ತಂಗಡಿ : ಮೀಸಲು ಅರಣ್ಯದೊಳಗೆ ಪರವಾನಿಗೆ ಪಡೆದ ಬಂದೂಕಿನಿಂದ ಕಡವೆಯನ್ನು ಬೇಟೆಯಾಡಿ ಸಾಗಿಸುವ ವೇಳೆ ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ್ದು,
ಓರ್ವ ಆರೋಪಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬಟ್ಟಾಡಿ ಎಂಬಲ್ಲಿ ದಡಂತಮಲೆ ಮೀಸಲು ಅರಣ್ಯ ಪ್ರದೇಶದೊಳಗೆ ಆಗಸ್ಟ್ 23 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ನಾಲ್ಕು ಜನ ಬಂದೂಕು ಹಿಡಿದು ಬೇಟೆಯಾಡುತ್ತಿರುವ ಬಗ್ಗೆ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಬಂದು ಖಚಿತ ಮಾಹಿತಿ ಮೇರೆಗೆ ಸುಮಾರು 5:30 ವೇಳೆಗೆ ಮಾಫ್ತಿಯಲ್ಲಿ ಕಾಡಿನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಕಡವೆಯನ್ನು ಬಂದೂಕಿನಿಂದ ಗುಂಡು ಹಾರಿಸಿ ಸಾಯಿಸಿ ಅದನ್ನು ಮಾಂಸ ಮಾಡಲು ಸಾಗಿಸುತ್ತಿದ್ದಾಗ ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದು. ಓರ್ವ ಆರೋಪಿ ಕಾಡಿನಲ್ಲಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಟ್ರಮೆಯ ಸಂದೇಶ್ , ಪುನೀತ್ , ಕೋಟ್ಯಾಪ್ಪ ಗೌಡ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಲೋಕೇಶ್ ಪರಾರಿಯಾಗಿದ್ದು ಆತನಿಗಾಗಿ ಬಲೆ ಬೀಸಲಾಗಿದೆ.

ಆರೋಪಿಗಳಿಂದ ಪರವಾನಿಗೆ ಪಡೆದಿದ್ದ ಬಂದೂಕು , ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು. ಸುಮಾರು ಎರಡು ಕ್ವಿಂಟಲ್ ತೂಕ ಇರುವ ಕಡವೆ ಗುಂಡೆಟಿಗೆ ಸಾವನ್ನಪ್ಪಿದ್ದು. ಈ ಕಡವೆಯನ್ನು ಬೆಳ್ತಂಗಡಿ ಪಶು ಇಲಾಖೆಯ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ಸುಬ್ರಮಣ್ಯದ ಮಣ್ಣಗುಂಡಿ ಅರಣ್ಯ ಇಲಾಖೆಯ ಮರದ ಡೀಪೋದ ಜಾಗದಲ್ಲಿ ದಫನ ನಡೆಸಲಾಗುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು.ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅವರಿಗೆ ನ್ಯಾಯಂಗ ಬಂಧನ ವಿಧಿಸಿದೆ.ದಾಳಿ ವೇಳೆ
ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಜಯಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಪಟ್ರಮೆ ಶಾಖೆಯ ಉಪಅರಣ್ಯಾಧಿಕಾರಿ ಲೋಕೇಶ್.ಎನ್ ಮತ್ತು ಕೊಕ್ಕಡ ಶಾಖೆಯ ಉಪಅರಣ್ಯಾಧಿಕಾರಿ ಅಶೋಕ್ ನೇತೃತ್ವದ ತಂಡದ ಸಿಬ್ಬಂದಿಗಳಾದ ಅರಣ್ಯ ಗಸ್ತು ವನಪಾಲಕರಾದ ವಿನಯ ಚಂದ್ರ , ಪ್ರಶಾಂತ್ , ರಾಜೇಶ್ ,ಸುನಿಲ್ , ಅರಣ್ಯ ವೀಕ್ಷಕ ಸಂತೋಷ್ , ವಾಹನ ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

error: Content is protected !!