ಚಾರ್ಮಾಡಿ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಗಾಟ..!: ವಾಹನ, ಜಾನುವಾರು, ಆರೋಪಿ ಪೊಲೀಸ್ ವಶಕ್ಕೆ: ಧರ್ಮಸ್ಥಳ ಪೊಲೀಸರಿಂದ ಕಾರ್ಯಾಚರಣೆ

ಚಾರ್ಮಾಡಿ: ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲಕುಮಾರ ಡಿ ಹಾಗೂ ಕೆ.ಲೋಲಾಕ್ಷ ಪಿ ಮತ್ತು ತಂಡ ತಡೆದಿದ್ದಾರೆ.

ಆ.13ರಂದು ಚಾರ್ಮಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಧರ್ಮಸ್ಥಳ ಠಾಣಾ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮೂಡಿಗೆರೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನದಲ್ಲಿ 3 ಹೋರಿಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ವಾಹನವನ್ನು ತಡೆದ ಪೊಲೀಸರು ವಾಹನ ಚಾಲಕನನ್ನು ಹಿಡಿದಿದ್ದಾರೆ. ಆದರೆ ಈ ವೇಳೆ ಗೂಡ್ಸ್ ವಾಹನದಲ್ಲಿ ಮತ್ತೊಬ್ಬ ಪರಾರಿಯಾಗಿದ್ದಾನೆ.
ಆರೋಪಿಗಳನ್ನು ಮೂಡಿಗೆರೆ ತಾಲೂಕಿನ ಕೂಡಹಳ್ಳಿ ಗ್ರಾಮದ ಇಂದಿರಾನಗರ ಮನೆಯ ಕೆ.ಕೆ ಪದ್ಮೇಶ್ (41 )ಹಾಗೂ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಬಾರೆಪಡ್ಪು ಮನೆಯ ಹಮೀದ್ ಎಂದು ಗುರುತಿಸಲಾಗಿದೆ.

ಪೊಲೀಸರು ಗೂಡ್ಸ್ ವಾಹನದಲ್ಲಿದ್ದ 3 ಜಾನುವಾರುಗಳನ್ನು, ವಾಹನವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!