ಮಚ್ಚಿನ ಗ್ರಾ.ಪಂ: ನೂತನ ಅಧ್ಯಕ್ಷೆಯಾಗಿ ರುಕ್ಮಿಣಿ ಆಯ್ಕೆ

ಮಚ್ಚಿನ: ಮುಂದಿನ ಎರಡೂವರೆ ವರ್ಷಗಳಿಗೆ ಮಚ್ಚಿನ ಗ್ರಾ.ಪಂನಲ್ಲಿ ಅಧ್ಯಕ್ಷೆಯಾಗಿ ರುಕ್ಮಿಣಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾತಿ ನಿಗದಿಯಾಗಿದ್ದು ,  ರುಕ್ಮಿಣಿ ಅವರು ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಈ ಹಿನ್ನಲೆ ಸೋಮಾವತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಚಂದ್ರಶೇಖರ್ ಕೆ.ಎಸ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಹೆಚ್ ಎಸ್.ಸಹಕರಿಸಿದರು.

error: Content is protected !!