ರಕ್ಷಿತ್ ಶಿವರಾಂ ಸೋಲಿಗೆ ಪಕ್ಷ ವಿರೋಧಿ ಚಟುವಟಿಕೆ ಕಾರಣ: ಅಸಾಮಾಧಾನದಿಂದ ಸಭೆಯಿಂದ ಹೊರಬಂದಿದ್ದೇವೆ: ರಕ್ಷಿತ್ ಶಿವರಾಂ ಬಳಗ ಸ್ಪಷ್ಟನೆ:

 

 

 

ಬೆಳ್ತಂಗಡಿ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲು-ಗೆಲುವಿನ ಕುರಿತು ಪರಾಮರ್ಶೆ ನಡೆಸಲು ಕಾಂಗ್ರೆಸ್ ‘ಪಕ್ಷದ ಸೋಲಿಗೆ ಕಾರಣವಾದ ಪರಾಮರ್ಶೆ ಸಮಿತಿ ರಚಿಸಿದ್ದು, ಈ ಸಮಿತಿ ಕಾಂಗ್ರೆಸ್ ಸೋಲಿನ ಬಗ್ಗೆ
ಪರಾಮರ್ಶೆ ಸಭೆಯ ನಡೆಸುವುದಕ್ಕಾಗಿ ಬೆಳ್ತಂಗಡಿಗೆ ಜು 14 ರಂದು  ಆಗಮಿಸಿದ್ದು ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣರಾದವರನ್ನು ವೀಕ್ಷಕರಾಗಿ ಹೇಗೆ ಕರೆಸಿದ್ದೀರಿ ಅದೇ ರೀತಿ
ಕೆಲವು ನಾಯಕರುಗಳು ಕಳೆದ  ವಿಧಾನ ಸಭಾ ಚುನಾವಣೆ ವೇಳೆ ಬೆಳ್ತಂಗಡಿ ಮೌನವಾಗಿದ್ದು  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರನ್ನು ಸೋಲಿಸಬೇಕು ಎಂಬ ರೀತಿಯಲ್ಲಿ ವರ್ತಿಸಿದ್ದರಿಂದಾಗಿ ಪಕ್ಷಕ್ಕೆ ಸೋಲಾಗಿದೆ. ಇಂತಹ ಪಕ್ಷ ವಿರೋಧಿಗಳನ್ನು ಪಕ್ಷದಿಂದ ವಜಾಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದಾಗ ನಮ್ಮ ಮೇಲೆಯೇ ಕೆಲವರು ರೇಗಾಡಿದರು ಇದರಿಂದ ಬೇಸರಗೊಂಡು  ಸಭೆಯಿಂದ ಅಸಾಮಾಧಾನದಿಂದ ಹೊರ ಬಂದಿದ್ದೇವೆ ಹೊರತು ಯಾರೂ ಕೂಡ ನಮ್ಮನ್ನು ಹೊರ ಕಳಿಸಿಲ್ಲ ಅದೇ ರೀತಿ ಗಲಾಟೆಯಾಗಲಿ  ಅಶಿಸ್ತಿನಿಂದ  ವರ್ತಿಸಿರುವುದು ನಾವು ಮಾಡಿಲ್ಲ .ಅದರೂ  ಮಾಧ್ಯಮಕ್ಕೆ ಕೆಲವರು ಸುಳ್ಳು ಮಾಹಿತಿ  ನೀಡಿದ್ದಾರೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಾಗೂ ರಕ್ಷಿತ್ ಶಿವರಾಂ ಬಳಗ ಸ್ಪಷ್ಟ ಪಡಿಸಿದೆ.

error: Content is protected !!