ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಸ್ಫೋಟಗೊಂಡ ಬಣ ರಾಜಕೀಯ..! ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಹೈಡ್ರಾಮಾ..!: ಅಸಾಮಾಧಾನ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು: ಬೆಳ್ತಂಗಡಿ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿ..?:

 

 

 

ಬೆಳ್ತಂಗಡಿ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲು-ಗೆಲುವಿನ ಕುರಿತು ಪರಾಮರ್ಶೆ ನಡೆಸಲು ಕಾಂಗ್ರೆಸ್ ‘ಪಕ್ಷದ ಸೋಲಿಗೆ ಕಾರಣವಾದ ಪರಾಮರ್ಶೆ ಸಮಿತಿ ರಚಿಸಿದ್ದು, ಈ ಸಮಿತಿ ಕಾಂಗ್ರೆಸ್ ಸೋಲಿನ ಬಗ್ಗೆ ಇಂದು
ಪರಾಮರ್ಶೆ ಸಭೆ ನಡೆಸುವುದಕ್ಕಾಗಿ ಬೆಳ್ತಂಗಡಿಗೆ ಆಗಮಿಸಿದ್ದು ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆದ ಘಟನೆ.ಜು.14 ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಸಹಿತ ಅಶ್ವಿನ್ ರೈ ಬಂಟ್ವಾಳ್ ವೀಕ್ಷಕರಾಗಿ ಸೇರಿದ್ದರು.

ಸಭೆ ಆರಂಭವಾಗುತ್ತಲೆ ರಕ್ಷಿತ್ ಶಿವರಾಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ರಾಜೇಶ್ ಭಟ್ ಸವಣಾಲು ಮತ್ತು ಪ್ರವೀಣ್ ಫೆರ್ನಾಂಡೀಸ್, ಸಚಿನ್ ನೂಜೋಡಿ ಸಹಿತ ಇತರರು ಅಸಾಮಾಧಾನ ಹೊರಹಾಕಿ ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆ ವೀಕ್ಷಕರಾಗಿ ಬಂದಿದ್ದ ಇಬ್ರಾಹಿಂ ಜತೆಗಿದ್ದರು. ಸೋಲಿಗೆ ಕಾರಣರಾದವರನ್ನು ವೀಕ್ಷಕರಾಗಿ ಹೇಗೆ ಕರಿಸಿದ್ದೀರಿ ಎಂದು ಸಭೆಯಲ್ಲಿ ಪ್ರಶ್ನಸಿದಾಗ ಮಾತಿಗೆ ಮಾತು ಬೆಳೆದು ಹೊಕೈ ವರೆಗೆ ತಲುಪಿದ ಘಟನೆ ನಡೆಯಿತು.

ಈ ವೇಳೆ ರಕ್ಷಿತ್ ಶಿವರಾಂ ಬಳಗವನ್ನು ಸಭೆಯಿಂದ ಹೊರನಡೆಯುಂತೆ ಸೂಚಿಸಿದರಲ್ಲದೆ, ಸಭೆಯಿಂದ ಹೊರನಡೆಯುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಅಶಿಸ್ತಿನ ನಡೆ ಮತ್ತೆ ಬುಗಿಲೆದ್ದಿದೆ.

ತಕ್ಷಣ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಶಾಂತಗೊಳಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್ ಜಿ.ಗೌಡ, ಶೈಲೇಶ್ ಹಾಗೂ ಅಭಿನಂದನ್ ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೆಂದು ಸ್ವಯಂ ಘೋಷಿಸಿಕೊಂಡ ಪ್ರವೀಣ್ ಫೆರ್ನಾಂಡಿಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಇಂದು ನಮ್ಮ ಕಾಂಗ್ರೆಸ್ ಪಕ್ಷದ ವೀಕ್ಷಕರ ಸಭೆಗೆ ಬಂದು ಗಲಭೆ ಎಬ್ಬಿಸಿದ್ದಾರೆ. ಶಿಸ್ತಿನ ಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿರುವುದು ಕಂಡು ಬಂದಿದೆ. ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಿದ್ದು ಕಂಡುಬಂದಿದೆ. ಮಾತ್ರವಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ತಳ್ಳಿದ್ದಾರೆ. ಈ ಕುರಿತು ಅಗತ್ಯವಾಗಿ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.ಈ ವರೆಗೆ ಪಕ್ಷದೊಳಗಿದ್ದ ಬಿನ್ನಮತ ವೀಕ್ಷಕರ ಮುಂದೆ ಬೀದಿಗೆ ಬಂದಂತಾಗಿದೆ.

error: Content is protected !!