ರಾಹುಲ್ ಗಾಂಧಿ ಲೋಕಸಭಾ ಸದಸ್ಯತನ ಅನರ್ಹ: ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೌನ ಪ್ರತಿಭಟನೆ:

ಬೆಳ್ತಂಗಡಿ : ರಾಹುಲ್ ಗಾಂಧಿಯವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಜು.12ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬೆಳ್ತಂಗಡಿ ಗ್ರಾಮೀಣ ಮತ್ತು ನಗರ ಸಮಿತಿ ವತಿಯಿಂದ ಮೂರು ಮಾರ್ಗದ ಬಳಿ ಮೌನ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಗಂಗಾಧರ ಗೌಡ ಅವರು ಇಂದಿರಾಗಾಂಧಿ ಕುಟುಂಬವನ್ನು ಮುಗಿಸುವ ಹುನ್ನಾರವನ್ನು ಕಳೆದ 10 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಮಾಡುತ್ತಿದೆ. ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮುಕ್ತ ಭಾರತವನ್ನಾಗಿಸಬೇಕು ಎಂಬ ಕೆಟ್ಟ ರಾಜಕೀಯವನ್ನು ಮಾಡುತ್ತಿದೆ. ರಾಹುಲ್ ಗಾಂಧಿಯವರು ಭಾರತವನ್ನು ಒಂದು ಗೂಡಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಕಾಶ್ಮೀರದಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ಮಾಡಿರುವುದಕ್ಕೆ ಅಭೂತಪೂರ್ವ ಜನ ಬೆಂಬಲವನ್ನು ನೋಡಿ ಬಿಜೆಪಿಗರು ಹತಾಶರಾಗಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಾಹುಲ್ ಗಾಂಧಿಯವರನ್ನು ಧಮನಿಸುವ ಕೆಲಸ ಮಾಡುತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಜಿ ಗೌಡ, ಕೆ.ಪಿ.ಸಿ.ಸಿ ಸದಸ್ಯರುಗಳಾದ ಮೋಹನ ಶೆಟ್ಟಿಗಾರ್, ಕೇಶವ ಗೌಡ, ಪಕ್ಷದ ಮುಖಂಡರುಗಳಾದ ಲೋಕೇಶ್ವರಿ ವಿನಯ ಚಂದ್ರ, ಇ ಸುಂದರ ಗೌಡ, ಅಭಿನಂದನ್ ಹರೀಶ್, ಉಷಾ ಶರತ್ ಎ ಸಿ. ಮ್ಯಾಥ್ಯೂ, ಅಶ್ರಫ್ ನೆರಿಯ, ಸಲೀಂ ಗುರುವಾಯನಕೆರೆ, ಮೆಹಬೂಬ್, ಬಿ.ಕೆ ವಸಂತ್, ಜಗದೀಶ್ ಡಿ, ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!