ಬೆಳ್ತಂಗಡಿ ಸರಣಿ ಅಪಘಾತ: ಎರಡು ಬಸ್ ಸೇರಿದಂತೆ 7 ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ:  ಪಾದಾಚಾರಿ ಯುವತಿ ಗಂಭೀರ:

 

 

 

ಬೆಳ್ತಂಗಡಿ: ಲಾರಿಯೊಂದು ಎರಡು ಬಸ್ಸು ಸೇರಿದಂತೆ ಇತರ 5, ವಾಹನಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತಿದ್ದ  ಯುವತಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಉಜಿರೆ ಕಡೆಯಿಂದ ಮರಳು ತುಂಬಿದ ಲಾರಿ ಬೆಳ್ತಂಗಡಿ ಸೇತುವೆ ಬಳಿ ಎರಡು  ಬಸ್ಸುಗಳಿಗೆ ಡಿಕ್ಕಿ ಹೊಡೆದು ನಂತರ  ರಸ್ತೆ ಬದಿ ಶೋ ರೂಂ ಒಂದರ ಬಳಿ ನಿಲ್ಲಿಸಲಾಗಿದ್ದ ಕಾರು ರಿಕ್ಷಾ ಸೇರಿದಂತೆ  7  ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ  ರಸ್ತೆ ಬದಿ   ನಡೆದುಕೊಂಡು ಹೋಗುತಿದ್ದ  ಇಬ್ಬರು ಯುವತಿಯರಿಗೂ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಒಬ್ಬರು ಪಾರಾಗಿ  ಓರ್ವ  ಯುವತಿ ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!