ಹವಾಮಾನ ವೈಪರೀತ್ಯ: ವಿಮಾನ ಸಂಚಾರದಲ್ಲಿ ವ್ಯತ್ಯಯ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಮತ್ತೊಂದು ಸುತ್ತು ಹೊಡೆದ ವಿಮಾನ..!

ಸಾಂದರ್ಭಿಕ ಚಿತ್ರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5,6 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ವಿಪರೀತ ಮಳೆಯ ಕಾರಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗದಿತ ಸಮಯಕ್ಕೆ ವಿಮಾನಗಳು ಲ್ಯಾಂಡ್ ಆಗಲು ಅಸಾಧ್ಯವಾಗಿದೆ.

ಇಂದು (ಜು.08) ಬೆಳಗ್ಗೆ ಸುರಿದ ಭಾರೀ ಮಳೆಯಿಂದ ಮುಂಬೈ ಹಾಗೂ ದುಬೈಯಿಂದ ಆಗಮಿಸಿದ ವಿಮಾನಗಳು ತಡವಾಗಿ ಲ್ಯಾಂಡ್ ಆಗಿದೆ. ಅಲ್ಲದೆ ಹೈದರಾಬಾದ್‌ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಮತ್ತೆ ಆಕಾಶದಲ್ಲೇ ಸುತ್ತುಹಾಕಿ ಬಳಿಕ ಹಿಂತಿರುಗಿ ಬಂದು ಲ್ಯಾಂಡ್ ಆಗಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

error: Content is protected !!