ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಗಡುವು ನಾಳೆಗೆ ಅಂತ್ಯ: ಜು.ತಿಂಗಳಿನಿಂದ 10 ಸಾವಿರ ರೂ ದಂಡ..!?

ನವದೆಹಲಿ: ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಗಡುವು ನಾಳೆಗೆ ಅಂತ್ಯವಾಗುತ್ತಿದ್ದು 2 ದಿನವಷ್ಟೇ ಬಾಕಿ ಇದೆ. ಜೂ.30ರ ವರೆಗೆ 1,000ರೂ ದಂಡ ಹಾಗೂ ಸೇವಾ ಶುಲ್ಕದೊಂದಿಗೆ ಆಧಾರ್ ಪ್ಯಾನ್ ಜೋಡಣೆ ಮಾಡಬಹುದು. ಈ ಗಡುವಿನೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಂಡರೆ, ನಿಮ್ಮ ಹಲವು ಪ್ರಮುಖ ಕೆಲಸಗಳು ನಿಲ್ಲುತ್ತವೆ. 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯಲು ಬ್ಯಾಂಕ್‌ನಲ್ಲಿ ಪ್ಯಾನ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಒಂದೇ ಬಾರಿಗೆ ಅಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಮ್ಯೂಚುವಲ್ ಫಂಡ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ, ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನೀವು ತೆರಿಗೆ ಪ್ರಯೋಜನ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲದಂತಹ ಸೌಲಭ್ಯಗಳಿಂದ ವಂಚಿತರಾಗಬಹುದು.

ಜುಲೈ ತಿಂಗಳಿನಿಂದ ಆಧಾರ್ ಪ್ಯಾನ್ ಜೋಡಣೆ ಮಾಡಿದ್ದಲ್ಲಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಜೊತೆಗೆ ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ. ಹೀಗಾಗಿ ಅಧಿಕ ದಂಡ ಮೊತ್ತದಿಂದ ತಪ್ಪಿಸಿಕೊಳ್ಳಲು 2 ದಿನದೊಳಗೆ ಆಧಾರ್ ಪ್ಯಾನ್ ಜೋಡಣೆ ಮಾಡುವುದು ಅನಿವಾರ್ಯವಾಗಿದೆ.

error: Content is protected !!