ಬೆಳ್ತಂಗಡಿ: ಕೊಲ್ಲಿ, ಕಿಲ್ಲೂರು ಶೌರ್ಯ ಘಟಕದ ಸದಸ್ಯರಾದ ರತನ್‌ಶೆಟ್ಟಿಯವರ ಮನೆಯ ಒಳಗೆ ಜೂ.14ರಂದು ಸಂಜೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು.
ಮನೆಯೊಳಗಿನ ಸೌಂಡ್ ಬಾಕ್ಸ್ನಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತಕ್ಷಣ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸ್ನೇಕ್ ಅಶೋಕ್ ಕುಮಾರ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ.
ವಿಪತ್ತು ನಿರ್ವಹಣಾ ತಂಡದ ಸಂಯೋಜಕರಾದ ಉಮೇಶ್ ಮಾಲೂರು, ಘಟಕ ಪ್ರತಿನಿಧಿ ವಿನಯ ಸೇನರ ಬೆಟ್ಟು, ರಮಾನಂದ, ಸತೀಶ್, ರಂಜಿತ್ ಜೊತೆ ಬಂದ ಸ್ನೇಕ್ ಅಶೋಕ್ ಕುಮಾರ್ ಲಾಯಿಲ ಅವರು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.