ಕಟ್ಟಿಯಿಂದ ಹೊಡೆದು ಸ್ವಂತ ಅಜ್ಜಿಯನ್ನೇ ಹತ್ಯೆಗೈದಿದ್ದ ಆರೋಪಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸಾವು..!

ಬೆಳ್ತಂಗಡಿ : ತನ್ನ ಅಜ್ಜಿಯನ್ನೇ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿ ಅಶೋಕ ಗೌಡ ಇಂದು ಮೃತಪಟ್ಟಿದ್ದಾನೆ.

ದುಶ್ಚಟಗಳಿಗೆ ದಾಸನಾಗಿದ್ದ ಆರೋಪಿ ಅಶೋಕ ಗೌಡ ಟಿ.ಬಿ. ಹಾಗೂ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜೂನ್ 7ರಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


2022ನೇ ಜುಲೈ 23 ರಂದು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕಾನರ್ಪ ಮನೆ ನಿವಾಸಿ ಅಶೋಕ ಗೌಡ (35ವ) ಎಂಬಾತನು ತನ್ನ ಅಜ್ಜಿ ಅಕ್ಕು ಗೌಡ (85ವ) ಎಂಬವರನ್ನು ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ. ಈತನನ್ನು ಬಂಧಿಸಿದ ಪೊಲೀಸರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ 54/2022 ಕಲಂ: 397, 302 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣಾಧೀನ ಕೈದಿಯಾಗಿ ಮಂಗಳೂರು ಸಬ್ ಜೈಲಿಗೆ ಅಟ್ಟಲಾಗಿತ್ತು.
ಆರೋಪಿ ಅಶೋಕ ಗೌಡ ಮೃತಪಟ್ಟಿರುವ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!