ಉರುಳಿಗೆ ಬಿದ್ದು ಚಿರತೆ ಸಾವು..!: ಮಂಗಳೂರಿನ ಮಿತ್ತಬೆಟ್ಟು ಬಳಿ ಘಟನೆ: ಐಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ

ಮಂಗಳೂರು : ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸ್ಥಳೀಯರು ಹಾಕಿದ ಉರುಳಿಗೆ ಚಿರತೆ ಬಿದ್ದು ಸಾವನ್ನಪ್ಪಿದ ಘಟನೆೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಬಳಿಯ ಮಿತ್ತಬೆಟ್ಟು ಎಂಬಲ್ಲಿ ನಡೆದಿದೆ.

ಮಿತ್ತಬೆಟ್ಟು ಸುತ್ತ-ಮುತ್ತ ಕಳೆದ ಕೆಲವು ತಿಂಗಳಿನಿಂದ ಚಿರತೆ ಹಾಗೂ ಇತರ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿತ್ತು. ಸ್ಥಳೀಯರ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿತ್ತು. ಇದರಿಂದ ಭಯಭೀತರಾದ ಸ್ಥಳೀಯರು ಕಾಡುಪ್ರಾಣಿಗಳ ಉಪಟಳ ಕಡಿಮೆಗೊಳಿಸಲು ಕಾಡಿನಲ್ಲಿ ಉರುಳು ಹಾಕಿದ್ದರು. ಈ ಉರುಳಿಗೆ ಕಳೆದ ರಾತ್ರಿ ಚಿರತೆ ಸಿಲುಕಿಕೊಂಡು ಇಂದು ಮುಂಜಾನೆ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಐಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!