ನವದೆಹಲಿ: ಭಾರತದ ಸ್ವಾತಂತ್ರ‍್ಯೋತ್ಸವದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಶಾಸಕಾಂಗ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಯ ನೆನಪಿಗಾಗಿ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು 2011ರ ನಾಣ್ಯ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಸಚಿವಾಲಯ ಈ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
75 ರೂಪಾಯಿಯ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು ಅದರ ಕೆಳಗೆ ‘ಸತ್ಯಮೇವ ಜಯತೇ’ ಎಂದು ಬರೆಯಲಾಗಿದೆ.
ಎಡಭಾಗದಲ್ಲಿ ‘ಭಾರತ್’ ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿಯೂ ಮತ್ತು ಬಲಭಾಗದಲ್ಲಿ ‘IಓಆIಂ’ ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ರೂಪಾಯಿ ಚಿಹ್ನೆ (₹) ಮತ್ತು ಸಿಂಹದ ಲಾಂಛನದ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ರ ಮುಖಬೆಲೆಯ ಮೌಲ್ಯ ಹೊಂದಿರಲಿದೆ.
ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್ ಸಂಕೀರ್ಣದ ಫೋಟೋ ಇರಲಿದೆ. ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ‘ಸಂಸದ್ ಸಂಕುಲ್’ ಎಂದು ಹಾಗೂ ಕೆಳಗಿನ ಪರಿಧಿಯಲ್ಲಿ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇದರ ಜತೆಗೆ, ‘2023’ ವರ್ಷವನ್ನು ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ ಪ್ರಿಂಟ್ ಮಾಡಲಾಗಿದೆ. ವೃತ್ತಾಕಾರದ ನಾಣ್ಯವು 44 ಮಿಲಿ ಮೀಟರ್ ವ್ಯಾಸ ಹೊಂದಿದೆ. ಬೆಳ್ಳಿ (50%), ತಾಮ್ರ (40%), ನಿಕಲ್ (5%) ಮತ್ತು ಸತು (5%) ಒಳಗೊಂಡ ನಾಲ್ಕು ಮಿಶ್ರಲೋಹದಿಂದ 35 ಗ್ರಾಂ ಪ್ರಮಾಣಿತ ನಾಣ್ಯ ತಯಾರಿಸಲಾಗಿದೆ.